ಸವಣೂರು : ಈ ಬಾರಿ ಮಾರ್ಚ್ ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಿಂದ ಹಾಜರಾಗಿದ್ದ ಎಲ್ಲಾ 23 ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದು ಲಿಖಿತ್ ರಾಜ್ (510/600) ವಿಶಿಷ್ಟ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಇಬ್ಬರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ್ದಾರೆ.
ಹಾಗೆಯೇ ವಾಣಿಜ್ಯ ವಿಭಾಗದ ಎಲ್ಲಾ 22 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಅಪೇಕ್ಷಾ ಜಿ. (575/600), ಅಮೀನಾಥ್ ಐಫಾ (562/600), ಶೈಬಾ (544/600), ನೂರುನ್ನೀಸಾ (530/600), ಶೈಮಾ (525/600) ಮತ್ತು ಯಶಸ್ವಿ ರೈ ಕೆ. (519/600) ಈ 6 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 12 ಮಂದಿ ಪ್ರಥಮ ದರ್ಜೆ, 3 ಮಂದಿ ದ್ವಿತೀಯ ದರ್ಜೆ ಹಾಗೂ ಓರ್ವ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿ ಶೇಕಡಾ 100 ಫಲಿತಾಂಶ ಲಭಿಸಿದೆ.
ಒಟ್ಟಾರೆಯಾಗಿ 45ರಲ್ಲಿ 45 ಮಂದಿ ತೇರ್ಗಡೆಯಾಗಿ ನೂರು ಶೇಕಡಾ ಫಲಿತಾಂಶ ದಾಖಲಾಗಿದೆ.
ಕಳೆದ ಸಾಲಿನಲ್ಲಿ ಪ್ರಾಂಶುಪಾಲರಾಗಿದ್ದು ಇದೀಗ ಸ್ವಯಂ ನಿವೃತ್ತಿ ಪಡೆದಿರುವ ಸೀತಾರಾಮ ಕೇವಳ ಮತ್ತು ಅವರ ತಂಡವನ್ನು ಸಂಚಾಲಕ ಸವಣೂರು ಸೀತಾರಾಮ ರೈ , ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಪೋಷಕರು ಅಭಿನಂದಿಸಿದ್ದಾರೆ.