ಕರ್ನಾಟಕದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ: ಫಾಕ್ಸ್‌ಕಾನ್

ಬೆಂಗಳೂರು: ಕರ್ನಾಟಕದಲ್ಲಿ ಐಫೋನ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ವಿಚಾರ ಸಂಬಂಧ ಎದ್ದಿದ್ದ ಗೊಂದಲಗಳಿಗೆ ಕರ್ನಾಟಕದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಹೇಳುವುದರ ಮೂಲಕ ಫಾಕ್ಸ್‌ಕಾನ್ ತೆರೆ ಎಳೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಎರಡು ಪುಟಗಳ ಪತ್ರ ಬರೆದಿರುವ ಫಾಕ್ಸ್‌ಕಾನ್ ಅಧ್ಯಕ್ಷ ಯಂಗ್ ಲಿಯು, ಬೆಂಗಳೂರಿನಲ್ಲಿ ‘ಪ್ರಾಜೆಕ್ಟ್ ಎಲಿಫೆಂಟ್’ ಅನ್ನು ಯಶಸ್ವಿಯಾಗಿ ಆರಂಭಿಸುವುದಾಗಿ ಹೇಳಿ, ಈ ಯೋಜನೆಗೆ ನಿಮ್ಮ ರಾಜ್ಯವನ್ನು ಸಂಭಾವ್ಯ ಹೂಡಿಕೆಯ ತಾಣವಾಗಿ ಪರಿಗಣಿಸುವುದರಿಂದ, ಯಾಂತ್ರಿಕ/ನಿಖರವಾದ ಯಂತ್ರೋಪಕರಣಗಳು, ಕೆ ಎಲೆಕ್ಟ್ರಿಕ್ ವಾಹನ, ಐಸಿ ವಿನ್ಯಾಸ ಮತ್ತು ಸೆಮಿಕಂಡಕ್ಟರ್ ವಿಭಾಗಗಳನ್ನು ವ್ಯಾಪಿಸಿರುವ ನಮ್ಮ ಇತರ ಬಹು ಯೋಜನೆಗಳಿಗೆ ಬಲವಾದ ಅಡಿಪಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಈ ಮೂಲಕ ಒಪ್ಪಂದದ ಬಗೆಗಿನ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

“ವಿಮಾನ ನಿಲ್ದಾಣದಲ್ಲಿನ ಸರಕು ನಿರ್ವಹಣೆಯ ದಕ್ಷತೆ ನಮ್ಮ ಕಾರ್ಯಾಚರಣೆಗಳ ಮೇಲೆ ಗಮನಾರ್ಹವಾದ ಪ್ರಭಾವವನ್ನು ಹೊಂದಿರುತ್ತದೆ. ನಾವು ನಮ್ಮ ಹಲವು ಉತ್ಪನ್ನಗಳಿಗೆ ಸಾಕಷ್ಟು ಪ್ರಮಾಣದಲ್ಲಿ ವಿಮಾನದ ಮೂಲಕ ಸರಕು ಸಾಗಣೆಯನ್ನು ಅವಲಂಬಿಸಿರುತ್ತೇವೆ.
ಮೂಲಸೌಕರ್ಯ ಸನ್ನದ್ಧತೆಯ ಕಾಲಾವಧಿ, ಕೌಶಲ್ಯ ಮತ್ತು ಪ್ರತಿಭೆಗಳ ನೇಮಕ, ಕರ್ನಾಟಕ ಸರ್ಕಾರದ ಬೆಂಬಲ ಮತ್ತು ಯೋಜನೆಗೆ ಮೀಸಲಿಟ್ಟ ಪ್ರದೇಶದ ಸುತ್ತಮುತ್ತಲಿನ ಸಾಮಾಜಿಕ ಮೂಲಸೌಕರ್ಯಗಳ ಲಭ್ಯತೆಯನ್ನು ಗಮನಿಸುವುದು ಉತ್ತಮ,” ಎಂದು ಹೇಳಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top