ಕಾಣಿಯೂರು : ಕುದ್ಮಾರು ಗ್ರಾಮದ ಕೆಲಂಬಿರಿ ಗರಡಿಯಲ್ಲಿ 48ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ಮಾ.7 ಹಾಗೂ 8 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.7 ಮಂಗಳವಾರ ಬೆಳಿಗ್ಗೆ ಸ್ಥಳ ಶುದ್ಧಿ ಹೋಮ, ನಾಗ್ರಬ್ರಹ್ಮ ತಂಬಿಲ ಮಧ್ಯಾಹ್ನ ಸಾರ್ವಜನಿಕ ಶ್ರೀ ಸತ್ಯನಾರಾಯಣ, ರಾತ್ರಿ ಕಡಬ ಯುವ ವಾಹಿತಿ ಘಟಕದ ವತಿಯಿಂದ ಭಜನಾ ಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ತೆಗೆಯುವುದು, ಅನಂತರ ಅನ್ನಸಂತರ್ಪಣೆ ಜರಗಲಿದೆ.
ಮಾ.8 ಬುಧವಾರ ಬೆಳಿಗ್ಗೆ ಕೊಡಮಂತಾಯ ದೈವದ ನೇಮೋತ್ಸವ, ಹರಿಕೆ ಮತ್ತು ಬಟ್ಟಲು ಕಾಣಿಕೆ, ಗಂಧ ಪ್ರಸಾದ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ ಕೂಟ, ಬರೆಪ್ಪಾಡಿ, ಬೆಳಂದೂರು, ಮರಕ್ಕಡ, ಕಾಯಿಮಣ ಅಂಗನವಾಡಿ ಪುಟಾಣಿಗಳಿಗೆ ನೃತ್ಯ ವೈವಿಧ್ಯ, ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಲಾಸಿರಿ ಕಾರ್ಯಕ್ರಮ ನಡೆಯಲಿದೆ.
ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಕಡಬ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉದ್ಘಾಟಿಸುವರು. ಕೆಲೆಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಬಿ.ಎ.ವಸಂತ ಪೂಜಾರಿ ಕೆಲೆಂಬೀರಿ ಅಧ್ಯಕ್ಷತೆ ವಹಿಸುವರು. ಬೆಳಂದೂರು ಗ್ರಾಪಂ ಅಧ್ಯಕ್ಷ ಲೋಹಿತಾಶ್ವ ಕೆಡೆಂಜಿಕಟ್ಟೆ ಶೈಕ್ಷಣಿಕ ಪುರಸ್ಕಾರ ನಡೆಸುವರು. ಯುವವಾಹಿನಿ ಅಧ್ಯಕ್ಷ ಉಮೇಶ್್ ಬಾಯಾರು ಬಹುಮಾನ ವಿತರಿಸುವರು. ಪುತ್ತೂರು ಪದ್ಮಶ್ರೀ ಸಿಸ್ಟಮ್ ನ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸುಳ್ಯ ವಿಧಾನಸಭಾ ಕ್ಷೇತ್ರ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಕುದ್ಮಾರು ತಿರಂಗಾ ವಾರಿಯರ್ಸ್ ಸಂಚಾಲಕ ಲೋಕೇಶ್ ಬಿ.ಎನ್. ಅತಿಥಿಯಾಗಿ ಭಾಗವಹಿಸುವರು.
ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬ್ರಹ್ಮ ಬೈದೆರುಗಳ ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾಣಿಬಾಲೆ ಗರಡಿ ಇಳಿಯುವುದು, ಬೈದೆರುಗಳ ಪಾತ್ರಿಗಳ ಸೇಠ್ ನಡೆಯಲಿದೆ. ಮಾ.9 ಬೆಳಿಗ್ಗೆ ಬೈದೆರುಗಳ ಸೇಠ್ಮ ಬಟ್ಟಲು ಕಾಣಿಕೆ, ಗಂಧ ಪ್ರಸಾದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.