ಬೆಂಗಳೂರು : ಆಲೋವೆರಾ ಜ್ಯೂಸ್ ಎಂದು ತಪ್ಪಾಗಿ ತಿಳಿದು ಕ್ರಿಮಿನಾಶಕ ಸೇವಿಸಿದ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ನಡೆದಿದೆ.
ಮೃತಳು 9ನೇ ತರಗತಿಯ ವಿದ್ಯಾರ್ಥಿನಿ 11ನೇ ವರ್ಷದ ಬಾಲಕಿ ನಿಧಿ ಕೃಷ್ಣ ಎಂದು ಹೇಳಲಾಗಿದೆ.
ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ನಿಧಿ ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ, ಮನೆಯವರು ಅಲೋವೆರಾ ಜ್ಯೂಸ್‌ನ ಡಬ್ಬದಲ್ಲಿ ಗಿಡಗಳಿಗೆ ಬಳಸುವ ಹರ್ಬಿಸೈಡ್ ಎಂಬ ಕ್ರಿಮಿನಾಶಕ ಔಷಧವನ್ನು ತುಂಬಿದ್ದರು. ಇದರಿಂದ ಮಾ.18ರಂದು ಬಾಲಕಿ ಜ್ಯೂಸ್ ಎಂದು ಭಾವಿಸಿ ಈ ಕ್ರಿಮಿನಾಶಕವನ್ನು ಕುಡಿದಿದ್ದಾಳೆ. ತಕ್ಷಣವೇ ಅನಾರೋಗ್ಯಕ್ಕೆ ಒಳಗಾದ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 31ರಂದು ನಿಧಿ ಮೃತಪಟ್ಟಿದ್ದಾಳೆ.
ಈ ಘಟನೆ ಮೈಸೂರು ರಸ್ತೆಯ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.