ಬೆಂಗಳೂರು: ಪಾರ್ಟಿ ಸರಿ ಮಾಡುತ್ತೇನೆ ಎಂದು ಹೊರಟ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಪಕ್ಷದಿಂದ ಹೊರಬಿದ್ದಿದ್ದಾರೆ. ಬಿಜೆಪಿ ಹೈಕಮಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷ ಪಕ್ಷದಿಂದ ಉಚ್ಚಾಟಿಸಿದೆ. ಈ ಅದಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತಿ ಇದೀಗ ರಾಜ್ಯ ಬಿಜೆಪಿ ನಾಯಕರು ಶಿಸ್ತಿನ ಪಾರ್ಟಿ ಎಂದು ಮಾತನಾಡುತ್ತಿದ್ದಾರೆ. ಇದರ ನಡುವೆ ಹಿರಿಯ ನಾಯಕ ಸದಾನಂದ ಗೌಡ ಯತ್ನಾಳ್ ಉಚ್ಚಾಟನೆಯನ್ನು ಸಮರ್ಥಿಸಿದ್ದು, ವಿಜಯೇಂದ್ರ ಬಣಕ್ಕೂ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಶಿಸ್ತು ಮುಖ್ಯ ಶಿಸ್ತು ಮೀರಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಅದೆಷ್ಟೇ ದೊಡ್ಡ ಸಮುದಾಯದ ನಾಯಕರಾದರೂ ಶಿಸ್ತಿನಿಂದ ಇದ್ದರೆ ಮಾತ್ರ ಸಮುದಾಯ ಜತೆಗಿರುತ್ತದೆ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ. ಯತ್ನಾಳ್ ಶಿಸ್ತುಮೀರಿ ಮಾತನಾಡಿದ್ದರು. ಈ ಹಿಂದೆ ಯತ್ನಾಳ್ ಅವರನ್ನು ನಾನೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದೆ. ಆದರೆ ಅಶಿಸ್ತು ಮುಂದುವರಿಸಿದ ಕಾರಣ ಹೈಕಮಾಂಡ್ ಕ್ರಮ ಕೈಗೊಂಡಿದೆ. ಐವರಿಗೆ ನೋಟಿಸ್ ನೀಡಿದಾಗಲೆ ಒಬ್ಬರ ತಲೆದಂಡ ಸ್ಪಷ್ಟವಾಗಿತ್ತು ಎಂದು ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯ ಬಿಜೆಪಿ ಪಕ್ಷವನ್ನು ಬ್ಯಾಲೆನ್ಸ್ ಮಾಡಬೇಕಿದೆ. ಇದಕ್ಕಾಗಿ ಹೈಕಮಾಂಡ್ ನೋಟಿಸ್ ನೀಡಿದೆ. ಆದರೆ ಇದು ಯಾರಿಗೆ ಅರ್ಥವಾಗುತ್ತೆ ಎಂದು ಸದಾನಂದ ಗೌಡ ಹೇಳಿದ್ದಾರೆ. ಲಿಂಗಾಯತ ಸಮಾವೇಶ ಸಭೆ ರೇಣುಕಾಚಾರ್ಯ ಮೂಲಕ ಯಾರು ಮಾಡಿಸುತ್ತಾರೆ ಎನ್ನೋದು, ಗೊತ್ತಿರುವ ಸಂಗತಿ ಎಂದು ಹೇಳುವ ಮೂಲಕ ಸದಾನಂದ ಗೌಡ ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಹಲವು ಬಾರಿ ಕೋರ್ ಕಮಿಟಿ ಸಭೆಯಲ್ಲಿ ಉದ್ದೇಖಿಸಿದ್ದೇನೆ, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಆಗುತ್ತಿರುವ ಹಿನ್ನಡೆ ಕುರಿತು ಹೇಳಿದ್ದೇನೆ. ಉದ್ಘಾಟನೆಯಿಂದ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ವಿಜಯೇಂದ್ರ ಕಾರ್ಯಶೈಲಿ ಬಗೆ ಬಹಿರಂಗವಾಗಿ ಮಾತನಾಡಲ್ಲ, ಆದರೆ ಹೈಕಮಾಂಡ್ ರಾಜ್ಯ ಬಿಜೆಪಿಯನ್ನು ಸರಿಮಾಡುವ ಕಾರ್ಯಕ್ಕೆ ಕೈಹಾಕಿದೆ. ಈಗಾಗಲೇ ಪಕ್ಷಕ್ಕೆ ಭಾರಿ ಡ್ಯಾಮೇಜ್ ಆಗಿದೆ. ಮೊದಲೈ ಕ್ರಮ ಕೈಗೊಂಡಿದ್ದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಒಳಜಗಳ, ಬಣ ಜಗಳದಿಂದ ಕಾರ್ಯಕರ್ತರಿಗೂ ನೋವಾಗಿತ್ತು ಎಂದು ಸದಾನಂದ ಗೌಡ ಹೇಳಿದ್ದಾರೆ.