ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಸಭೆಯಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದ ಪುತ್ತೂರು ಟೌನ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯದ ಶ್ರೀ ಶೇಖರ್ ಶೆಟ್ಟಿ ಇವರು, ಸೋಲು ಗೆಲುವಿನ ಪಯಣದಲ್ಲಿ ಮಕ್ಕಳನ್ನು ಸೋಲಲು ಬಿಡಿ, ಸೋತ ನಂತರ ಗೆಲುವು ಪಡೆದುಕೊಳ್ಳುವುದು ಗೆಲುವಿನ ಪ್ರಥಮ ದಾರಿಯಾಗಿರುತ್ತದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಿ ಎಂದು ಅಭಿಪ್ರಾಯಪಟ್ಟರು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಪುರಂದರ ದಾಸರ ಕೀರ್ತನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲು,ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ಪಾತ್ರ ಎಷ್ಟಿದೆಯೋ ಅಷ್ಟೇ ಮಹತ್ವವಾದ ಪಾತ್ರ ಪೋಷಕರದ್ದು ಆಗಿರುತ್ತದೆ ಎಂದು ಬಂದಿರುವ ಎಲ್ಲಾ ಪೋಷಕರಿಗೂ ಮನದಟ್ಟು ಮಾಡಿದರು.

ಈ ಶೈಕ್ಷಣಿಕ ಸಾಲಿನ ರಕ್ಷಕ ಶಿಕ್ಷಕ ಸಭೆಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ, ಉಪಾಧ್ಯಕ್ಷರಾಗಿ ತನುಜಾ, ಕಾರ್ಯದರ್ಶಿಯಾಗಿ ರಾಕೇಶ್ ವಾಣಿಜ ವಿಭಾಗದ ಉಪನ್ಯಾಸಕರು, ಜೊತೆ ಕಾರ್ಯದರ್ಶಿಯಾಗಿ ಪುಷ್ಪಲತಾ ಹಾಗೂ ಜಾನ್ ಡಿಸೋಜಾ, ಕೋಶಾಧಿಕಾರಿಯಾಗಿ ರಶ್ಮಿ ಆಂಗ್ಲ ವಿಭಾಗದ ಮುಖ್ಯಸ್ಥರು, ಸದಸ್ಯರುಗಳಾಗಿ ಉಮೇಶ್ ನಾಯ್ಕ್, ಜಯಶ್ರೀ, ಪದ್ಮನಾಭ, ಸರಸ್ವತಿ, ಸುಚೇತ ರೈ, ವಾಸು ನಾಯ್ಕ, ರಾಧಾಕೃಷ್ಣ, ಚರಣ್ ಕುಮಾರ್, ಪ್ರಫುಲ್ಲ, ಜಯರಾಮ್ ಯು.ಬಿ. ಆಯ್ಕೆಯಾದರು.

ವೇದಿಕೆಯಲ್ಲಿ ಕಾಲೇಜಿನ ಆಡಳಿತಾಧಿಕಾರಿಯಾದ ಅರ್ಪಿತ್ ಟಿ.ಎ. ಹಾಗೂ ಉಪ ಪ್ರಾಂಶುಪಾಲರಾದ ರಕ್ಷಣಾ ಟಿ. ಆರ್. ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿಯಾದ ರಾಕೇಶ್ ಸ್ವಾಗತಿಸಿ, ಕೋಶಾಧಿಕಾರಿಯದ ರಶ್ಮಿ ವಂದಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ. ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು .ಇಂಗ್ಲಿಷ್ ಉಪನ್ಯಾಸಕಿಯಾದ ದೀಪ್ತಿ ಎ.ಸಿ. ಕಾರ್ಯಕ್ರಮವನ್ನು ನಿರೂಪಿಸಿದರು.