ಬೆಳ್ತಂಗಡಿ: ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಗ್ ಎಳೆದು ತೊಂದರೆ ನೀಡಿರುವ ಕುರಿತು ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಡುಬಿದಿರೆಯ ಕಾಲೇಜೊಂದರ ವಿದ್ಯಾರ್ಥಿನಿಗೆ ಪರಿಚಯಸ್ಥ ವೇಣೂರು ಗ್ರಾಮದ ಶಿವಾಜಿನಗರ ಕಾಲೋನಿ ನಿವಾಸಿ ಆಸ್ಪಕ್ (27) ಎಂಬಾತ ತೊಂದರೆ ನೀಡಿದಾತ.
ಬುಧವಾರ ಮೂಡುಬಿದ್ರೆಯಿಂದ ವೇಣೂರಿಗೆ ಬಸ್ಸಿನಲ್ಲಿ ಬರುವಾಗ ಆಕೆ ಕುಳಿತಿದ್ದ ಸೀಟಿನ ಬಳಿ ನಿಂತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಯಾಗ್ ಎಳೆದು ತೊಂದರೆ ನೀಡಿದ್ದಾನೆ ಎಂದು ಕುರಿತು ದೂರಿನಲ್ಲಿ ತಿಳಿಸಲಾಗಿದೆ.