ಪಡುಮಲೆ : ಪಡುಮಲೆ ಶ್ರೀ ಕೂವೆ ಶಾಸ್ತರ ವಿಷ್ಣುಮೂರ್ತಿ ದೇವಾಲಯದಲ್ಲಿ 1008 ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಮಾ.5 ರಂದು ನಡೆಯಿತು.
ಪೂರ್ವಾಹ್ನ ಗಂ 5 ರಿಂದ ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ವಾಸುದೇವ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇಧ ಮೂರ್ತಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹೋಮ,ಕವಟೋದ್ಘಾಟನೆ,ಶಾಂತಿ, ಪ್ರಾಯಶ್ಚಿತ್ತ ಮತ್ತು ಶಾಂತಿ ಹೋಮ ನಡೆದು ಬಳಿಕ ಪಡುಮಲೆ ಒಡೆಯ ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವರಗೆ ಕಲಶಾಭಿಷೇಕ ಅವಭೃತ ಪ್ರೋಕ್ಸಣೆ ಮಹಾಪೂಜೆ ,ಮಂತ್ರಾಕ್ಷತೆ ಕಾರ್ಯಕ್ರಮ ನೆಡೆಯಿತು. .ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ 1ರಿಂದ ನಾಟ್ಯ ಶಿವ ವಿದುಷಿ ಸುಜಾತ ರೈ ಇವರ ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ. 1.30 ರಿಂದ ವಿದುಷಿ ಶುಭಾ ಶಿವಕುಮಾರ್ ಸಾಮಗಾನ ಪಡಿಬಾಗಿಲು ಅಳಿಕೆ ಇವರಿಂದ ಭಕ್ತಿ ಸಂಗೀತ, ಕಾರ್ಯಕ್ರಮ ನಡೆಯಿತು.
ಅಪರಾಹ್ನ ಗಂ 3 ರಿಂದ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ ಹಾಗೂ ಶ್ರೀ ಅಯ್ಯಪ್ಪ ಮಹಿಳಾ ಭಜನಾ ತಂಡ ಪೆರೀಗೇರಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ .
ರಾತ್ರಿ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರಲ್ ರಿ ಪದಡ್ಕ ಪಡುಮಲೆ ಪುತ್ತೂರು ಇದರ ವಿದ್ಯಾರ್ಥಿಗಳಿಂದ ನೃತ್ಯ ಸಂದ್ಯಾ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ರಾತ್ರಿ ನೀಲೇಶ್ವರ ಗಂಗಾಧರ ಮಾರಾರ್ ಬಳಗದವರಿಂದ ತಾಯಂಬಕ ಸೇವೆ, 8 ರಿಂದ ಶ್ರೀ ದೇವರ ಉತ್ಸವ ಬಲಿ, ನೃತ್ಯ ಬಲಿಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಶ್ರೀ ಭೂತ ಬಲಿ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಭಟ್ ಚಂದುಕೂಡ್ಲು, ದೇವಸ್ಥಾನ ಪವಿತ್ರ ಪಾಣಿ ಕೇಶವ ಭಟ್ ಕೂವೆತೋಟ, ಬ್ರಹ್ಮಕಲಶೋತ್ವವ ಸಮಿತಿ ಗೌರವಾಧ್್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆಗುತ್ತು, ಪೇರಾಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮನೋಹರ, ಬ್ರಹ್ಮಕಲಶೋತ್ಸವ ಅರ್ಥಿಕ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಬಿ., ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿಷ್ಣು ಭಟ್ ಪಡ್ಪು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ಆಳ್ವ ಗಿರಿಮನೆ, ಪ್ರಭಾಕರ ಗೌಡ ಕನ್ನಯ, ಅಪ್ಪಯ್ಯ ನಾಯ್ಕ, ತಿಲೋತ್ತಮಾ ರೈ, ಸುಮಿತ್ರಾ ಯು.ಕೆ, ಅರ್ಚಕ ಮಹಾಲಿಂಗ ಭಟ್, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ, ಸಮಿತಿಗಳ ಪ್ರಮುಖರಾದ ಜಯಂತ್ ರೈ ಕುಡ್ಕಾಡಿ, ಸತೀಶ್ ರೈ ಕಟ್ಟಾವು, ಶ್ರೀನಿವಾಸ ಗೌಡ ಕನ್ನಯ, , ಪದ್ಮನಾಭ ರೈ ಅರೆಪ್ಪಾಡಿ, ಅಚ್ಯುತ ಭಟ್ ಪೈರುಪುಣಿ, , ರಾಜೇಶ್ ರೈ ಮೇಗಿನಮನೆ, ಸಬ್ಬಪ್ಪ ಪಾಟಾಳಿ ಪಟ್ಟೆ, ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಕೆ., ಉಪಾಧ್ಯಕ್ಷ ಸಂತೋಷ್ ಅಳ್ವ, ,ಅಶಿತ್ ರೈ ಪೇರಾಲು, ರವಿರಾಜ ರೈ ಸಜಂಕಾಡಿ, ಉಪಸ್ಥಿತರಿದ್ದರು.