ಸುಳ್ಯ: ನಿಂತಿಕಲ್ಲು-ಬೆಳ್ಳಾರೆ-ಐವರ್ನಾಡು ಮುಖ್ಯರಸ್ತೆ ಹೊಂಡಗುಂಡಿಗಳಿಂದ ಕೂಡಿದ್ದು, ಈ ರಸ್ತೆಯಲ್ಲಿ ಸುಳ್ಯ ಶಾಸಕರೇ ಪ್ರತಿನಿತ್ಯ ಬಂದು ಹೋಗುವ ರಸ್ತೆಯಾಗಿದೆ. ಆದರೆ ಅಭಿವೃದ್ಧಿ ಕಡೆ ಈ ವರೆಗೂ ಗಮನ ನೀಡದಿರುವುದು ದುರಾದೃಷ್ಟ.
ಈ ರಸ್ತೆಯ ದುರಸ್ತಿಗಾಗಿ ಕಳೆದ ಮಳೆಗಾಲದಲ್ಲೇ ಅನುದಾನ ಮಂಜೂರಾಗಿದ್ದರೂ ಇದೀಗ ಮತ್ತೊಂದು ಮಳೆಗಾಲ ಹತ್ತಿರ ಬರುತ್ತಿದ್ದರೂ ದುರಸ್ತಿ ಕಾರ್ಯ ಮಾತ್ರ ಮುಗಿದಿಲ್ಲ.

ಶಾಸಕರು ಇದೇ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿದ್ದರೂ ಇದಕ್ಕೆ ಸಮಸ್ಯೆ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ. ಇದಕ್ಕೆ ಉದಾಹರಣೆ ನಿಂತಿಕಲ್ಲು-ಬೆಳ್ಳಾರೆ-ಐವರ್ನಾಡು ರಸ್ತೆ. ಕೂಡಲೇ ಈ ರಸ್ತೆಯ ದುರಸ್ತಿ ಕಾರ್ಯ ಮಾಡುವಂತೆ ಸ್ಥಳೀಯ ನಾಗರಿಕರು, ಸಾರ್ವಜನಿಕ ವಾಹನ ಸವಾರರು ಆಗ್ರಹಿಸಿದ್ದಾರೆ.