ಪುತ್ತೂರು: ಗ್ರಾಮ ಪಂಚಾಯತ್ ಗೆ ಸೇರಿದ ಬಾಡಿಗೆ ಕೊಠಡಿಯೊಂದರಲ್ಲಿ ಕಳೆದ ಹಲವು ವಷ೯ಗಳಿಂದ ತನ್ನ ತಾಯಿಯೊಂದಿಗೆ ವಾಸ್ತವ್ಯವಿದ್ದ ವಿಶೇಷ ಚೇತನೆಯ ಬಾಳಿಗೆ ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಕಾಗಿದೆ
ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡವು ನಿವಾಸಿ ಬೇಬಿ ಅವರಿಗೆ ಜ್ಞಾನವಿಕಾಸ ಕಾರ್ಯಕ್ರಮದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ರಚನೆಯಾದ “ವಾತ್ಸಲ್ಯ ಮನೆ” ಯನ್ನು ಸೋಮವಾರ ಕೇಯ್ಯೂರು ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ರಾವ್ ಬೊಳಿಕ್ಕಲ ಹಸ್ತಾಂತರ ಮಾಡಿ, ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ನಡೆಯುತ್ತಿದ್ದು ಇಂದು ಈ ಅಂಗವೈಕಲ್ಯರಾದ ಬೇಬಿ ಇವರಿಗೆ ಈ ಒಂದು ಹೊಸ ಮನೆ ರಚನೆಯಾಗಿದ್ದು ಈ ಮನೆಯಲ್ಲಿ ಆರೋಗ್ಯದಿಂದ ಸುಖ ಸಂತೋಷದಿಂದ ಬಾಳಲಿ ಎಂದು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನಜಾಗೃತಿ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ, ಮಾತೃಶ್ರೀ ಅಮ್ಮನವರ ಪರಿಕಲ್ಪನೆ ಎಂತಹದ್ದು ಎಂದರೆ ಸಮಾಜದಲ್ಲಿರುವ ನಿರ್ಗತಿಕರನ್ನು ಹುಡುಕಿ ಅವರ ಜೀವನ ಉತ್ತಮವಾಗಿರಲೆಂದು ಇಂತಹ ಹಲವಾರು ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ್ದಾರೆ. ನಮ್ಮ ತಾಲೂಕಿನಲ್ಲಿ ಇದು ಮೂರನೇ ಮನೆ ಈ ಮನೆಯಲ್ಲಿ ಬೇಬಿ ಅವರ ಜೀವನ ಸುಖಮಯವಾಗಿರಲಿ ಎಂದರು.
ಗ್ರಾಮ ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮಾತನಾಡಿ, ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದು ಈ ವಾತ್ಸಲ್ಯ ಮನೆಯ ಹಿಂದೆ ಈ ಗ್ರಾಮದ ಬಹಳಷ್ಟು ಮಂದಿ ಶ್ರಮವಹಿಸಿದ್ದಾರೆ ಎಂದರು. ವಾತ್ಸಲ್ಯ ಮನೆ ನಿಮಾ೯ಣದ ಹಿಂದೆ ಶ್ರಮವಹಿಸಿದವರನ್ನು ಈ ಸಂದಭ೯ದಲ್ಲಿ ಶಾಲು ಹೂ ನೀಡಿ ಗೌರವಿಸಲಾಯಿತು. ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ, ತಾಲೂಕಿನ ಮಾಜಿ ಜನಜಾಗೃತಿ ಅಧ್ಯಕ್ಷ ಮಹಾಬಲ ರೈ ವಳತಡ್ಕ ಕೇಂದ್ರ ಒಕ್ಕೂಟ ಸಮಿತಿ ತಾಲೂಕು ಅಧ್ಯಕ್ಷ ಉದಯ್ ಕುಮಾರ್, ಯೋಜನಾಧಿಕಾರಿ ಶಶಿಧರ್ ಎಂ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಕೆದಂಬಾಡಿ ವಲಯದ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಕೆದಂಬಾಡಿ ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಜನ ಜಾಗೃತಿಯ ಗ್ರಾಮ ಸಮಿತಿ ಅಧ್ಯಕ್ಷರು, ಕುಂಬ್ರ ವಲಯದ ವಲಯಾಧ್ಯಕ್ಷರು, ಕುಂಬ್ರ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರು ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷರು ಒಕ್ಕೂಟ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.