ಪುತ್ತೂರು: ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ವತಿಯಿಂದ ಪುತ್ತೂರಿಗೆ ಆಗಮಿಸಿದ ನಂದಿ ರಥ ಯಾತ್ರೆಗೆ ದರ್ಬೆಯಲ್ಲಿ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

ದರ್ಬೆಯಲ್ಲಿ ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾಂಗಳವರು ದೇಶಿ ನಂದಿಗೆ ಹಾರಾರ್ಪಣೆ ಮಾಡಿ ಶ್ರೀ ಕೃಷ್ಣನ ವಿಗ್ರಹಕ್ಕೆ ಪುಷ್ಪಾರ್ಚಣೆ ಮಾಡಿದರು. ಡಾ. ಸಚಿನ್ ಶಂಕರ್ ಹಾರಕೆರೆಯವರು ತೆಂಗಿನ ಕಾಯಿ ಒಡೆಯುವ ಮೂಲಕ ನಂದಿ ರಥಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭ ಶಂಖನಾದ, ಚೆಂಡೆಯ ಸದ್ದು, ಕುಣಿತ ಭಜನೆ ಮೆರವಣಿಗೆ ವಿಶೇಷ ಮೆರುಗು ನೀಡಿತು.

ದರ್ಬೆಯಿಂದ ಆರಂಭಗೊಂಡ ಮೆರವಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡು ಬಳಿಕ ನಟರಾಜ ವೇದಿಕೆಯಲ್ಲಿ ಪ್ರೇಮಲತಾ ರಾವ್, ವೀಣಾ ಕೊಳತ್ತಾಯ, ವತ್ಸಲರಾಜ್ಜಿ, ಭಾಗ್ಯಶ್ರೀ, ಈಶ್ವರಿ, ಚಂದ್ರಾವತಿ, ಪುಷ್ಪಲತಾ, ಪಾರ್ವತಿ ಭಟ್ ಸಹಿತ 200 ಮಂದಿ ಮಹಿಳೆಯರು ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರು. ಬಳಿಕ ಧಾರ್ಮಿಕ ಸಭೆ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಗೋಸೇವಾ ಗತಿವಿಧಿ ಕರ್ನಾಟಕ ಸಮಿತಿಯ ಪ್ರಕಾಶ್ಚಂದ್ರ ರೈ ಕೈಕಾರ, ನಂದಿ ರಥಯಾತ್ರೆ ಸಂಚಾಲನ ಸಮಿತಿ ಪುತ್ತೂರು ಇದರ ಕಾರ್ಯದರ್ಶಿ ದಿನೇಶ್ ಪಂಜಿಗ, ಕೋಶಾಧಿಕಾರಿ ಪ್ರಸನ್ನ ಮಾರ್ತ, ಸದಸ್ಯೆ ವಸಂತಲಕ್ಷ್ಮೀ ವಿಜಯಲಕ್ಷ್ಮೀ ಶಗ್ರಿತ್ತಾಯ, ವಿಶ್ವಹಿಂದು ಪರಿಷತ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ, ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಸಂತೋಷ್ ಕೈಕಾರ, ಸಂತೋಷ್ ಬೋನಂತಾಯ, ನಾಗೇಂದ್ರ ಬಾಳಿಗ, ಶಶಿಧರ ನಾಯಕ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕೃಷ್ಣವೇಣಿಪ್ರಸಾದ್ ಮುಳಿಯ ದಂಪತಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಮಾಜಿ ಸದಸ್ಯ ರಾಮಚಂದ್ರ ಕಾಮತ್, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಸ್, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಎಸ್ ಅಪ್ಪಯ್ಯ ಮಣಿಯಾಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಚ್ಚುತ ನಾಯಕ್, ಉದಯ ಕುಮಾರ್ ಹೆಚ್, ರಾಜೇಶ್ ಬನ್ನೂರು, ಡಾ. ರವೀಶ್ ಪಡುಮಲೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪಿ.ಜಿ.ಜಗನ್ನಿವಾಸ ರಾವ್, ವಿದ್ಯಾಗೌರಿ, ದೀಕ್ಷಾ ಪೈ, ಇಂದಿರಾ ಪಿ, ಸಂತೋಷ್ ಬೊಳುವಾರು, ಪೂರ್ಣಿಮ, ವಿಜಯಲಕ್ಷ್ಮೀ ಶಗ್ರಿತ್ತಾಯ, ಶಿವಪ್ರಸಾದ್ ಇ, ರಾಮದಾಸ್ ಹಾರಾಡಿ, ಸತೀಶ್ ನಾಕ್ ಪರ್ಲಡ್ಕ, ಮನೀಶ್ ಬಿರ್ವಾ, ರವಿನಾರಾಯಣ, ಹರಿಣಿ ಪುತ್ತೂರಾಯ, ಯುವರಾಜ್ ಪೆರಿಯತ್ತೋಡಿ, ಹರೀಶ್ ಬಿಜೆತ್ರೆ, ನಿತೀಶ್ ಕುಮಾರ್ ಶಾಂತಿವನ, ನಾಗೇಶ್ ಟಿ.ಎಸ್, ನವೀನ್ ರೈ ಕೈಕಾರ, ಪ್ರವೀಣ್ ಸರಳಾಯ,ಶಶಿಧರ್ ಬಾಳಿಗ, ನಾಗೇಂದ್ರ ಬಾಳಿಗ, ನಿರಂಜನ್, ಶ್ರೀಧರ್ ಪಟ್ಟ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮೋಹನ್ ರೈ ನರಿಮೊಗರು, ಶ್ರೀಧರ್ ತೆಂಕಿಲ, ನವೀನ್ ಪಡಿವಾಳ್, ಭಾಮಿ ಜಗದೀಶ್ ಶೆಣೈ, ವಿನಯ ಭಂಡಾರಿ, ಕಿಸಾನ್ ಸಂಘದ ಸುಬ್ರಾಯ, ಮಹೇಶ್ ಕೇರಿ,ವಿಶಾಖ್ ರೈ ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಆಲಡ್ಕ ಸದಾಶಿವ ಭಜನಾ ಮಂಡಳಿಯ ಸದಸ್ಯರು ಕುಣಿತ ಭಜನೆ ನೆರವೇರಿಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಸಂಪನ್ನವಾದ ಬಳಿಕ ದೇವಳದ ನಟರಾಜ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾಂಗಳವರು ಆಶೀರ್ವಚನ ನೀಡಿ, ಭಾರತವನ್ನು ಸಂಪದ್ಭರಿತ ರಾಷ್ಟ್ರವಾಗಿಸಲು ಹಾಗೂ ಗೋವನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಲು ಗೋವಿನ ಸಂರಕ್ಷಣೆಗೆ ಮುಂದಾಗಬೇಕು. ನಾವು ಗಿಡಮರಗಳಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ದೇವರನ್ನು ಕಾಣುತ್ತೇವೆ. ಅದರೆ ಸರ್ವ ವಿಧದಿಂದ ಪೂಜಿಸಲ್ಪಡುವ ಗೋವನ್ನು ರಕ್ಷಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಯಾವುದೇ ಪಕ್ಷಗಳ ಸರಕಾರ ಬಂದರೆ ಒಲೈಕೆ. ಅದನ್ನು ಬದಿಗೊತ್ತಿ ಗೋವನ್ನು ಸಂರಕ್ಷಿಸುವ ಕೆಲಸ ಆಗಬೇಕು. ಅದಕ್ಕಾಗಿ ಮನಸ್ಸುಗಳು ಬದಲಾಗಬೇಕೆಂದು ರಾಜ್ಯಾದ್ಯಂತ ದೇಶದಾದ್ಯಂತ ರಥಯಾತ್ರೆ ಜಾಗೃತಿ ಮೂಡಿಸುತ್ತದೆ ಎಂದರು.
ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಕೂಚಿ ಭಾಷಣ ಮಾಡಿ, ಈ ರಥ ಯಾತ್ರೆ ಗೋ ರಕ್ಷಣೆಗೆ ದೊಡ್ಡ ಕ್ರಾಂತಿಯಾಗಲಿದೆ. ಇವತ್ತು ಗೋವುಗಳನ್ನು ಉಳಿಸಬೇಕಾದರೆ ಗೋ ಮಾರಿದ ವ್ಯಕ್ತಿ ಯಾರು. ಆತನಿಗೆ ವ್ಯವಹಾರಿಕ ದೃಷ್ಟಿ ಯಾಕಿದೆ ಎಂಬ ಚಿಂತನೆ ಮಾಡಬೇಕು. ಮನುಕುಲದ ಮುಂದಿನ ರಕ್ಷಣೆಗಾಗಿ ಗೋವನ್ನು ಉಳಿಸಬೇಕಾಗಿದೆ. ಇಡಿ ಭಾರತದ ವ್ಯವಸ್ಥೆಯನ್ನು ಹಾಳು ಮಾಡಿರುವ ರಸಗೊಬ್ಬರದ ವಿರುದ್ದ ಹೋರಾಟ ಮಾಡಬೇಕಾದರೆ ಸಾವಯವ ಕೃಷಿ ಮಾಡಬೇಕು. ಅದಕ್ಕಾಗಿ ಎಂಡೋ ಸಲ್ಫಾನ್ ಮತ್ತು ರಸಗೊಬ್ಬರದ ವಿರುದ್ದ ಹೋರಾಟಕ್ಕೆ ಗೋ ತಳಿಯನ್ನು ಉಳಿಸಬೇಕು. ಇವತ್ತು ಅಣು ಬಾಂಬ್ ಗಿಂತಲೂ ರಸಗೊಬ್ಬರವೇ ದೊಡ್ಡ ಬಾಂಬ್ ಎಂದರು.
ಈ ಸಂದರ್ಭದಲ್ಲಿ ದೇಶಿ ತಳಿಯನ್ನು ಸಾಕುತ್ತಿರುವ ಬೆಟ್ಟಂಪಾಡಿ ಗ್ರಾಮದ ಸುರೇಶ್ ಸರಳಿಕಾನ, ಸರ್ವೆ ನಿವಾಸಿ ದುರ್ಗಾವತಿ ಮತ್ತು ಪಡ್ಡಾಯೂರು ನಿವಾಸಿ ಉದಯ ಶಂಕರ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನೀನ್ಯಾರಿಗಾದೆಯೋ ಎಲೆ ಮಾನವ ಎಂಬ ಪುಣ್ಯ ಕೋಟಿಯ ನೃತ್ಯರೂಪಕ ಪ್ರದರ್ಶನಗೊಂಡಿತು. ರಥ ಯಾತ್ರೆಯಲ್ಲಿ ಗೋ ಉತ್ಪನ್ನಗಳ ಮಾರಾಟ ಮಳಿಗೆಯಿದ್ದು, ಗೋಮಯ ಹಣತೆ ಕಿಟ್ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಚಿನ್ ಶಂಕರ್ ಹಾರಕೆರೆ, ಗೋಸೇವಾ ಗತಿವಿಧಿ ಕರ್ನಾಟಕ ಇದರ ಜಿಲ್ಲಾ ಸಂಯೋಜಕ ಪ್ರವೀಣ್ ಸರಳಾಯ, ಸಂಚಲನ ಸಮಿತಿ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ,ರಾಷ್ಟ್ರೀಯ ಗೋ ಸೇವಾ ಟ್ರಸ್ಟ್ ಅಧ್ಯಕ್ಷ ಭಕ್ತಿ ಭೂಷಣ್ ದಾಸ್, ನಂದಿ ರಥಯಾತ್ರೆ ಸಂಚಲನ ಸಮಿತಿ ಕಾರ್ಯದರ್ಶಿ ದಿನೇಶ್ ಪಂಜಿಗ, ಮೋಹನ್ ದಾಸ್, ಪ್ರಸಾದ್ ಶ್ಯಾನ್ ಬೋಗ ಮತ್ತಿತರರು ಉಪಸ್ಥಿತರಿದ್ದರು.