ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 69ನೇ ಕಾರ್ಯಕ್ರಮವಾಗಿ ಗಾಂಧಾರಿ ವಿವಾಹ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ,ಪ್ರಕಾಶ ಅಭ್ಯಂಕರ ಬೆಳ್ತಂಗಡಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ, ಅರ್ಜುನ ಅಭ್ಯಂಕರ ಬೆಳ್ತಂಗಡಿ, ಅರ್ಥಧಾರಿಗಳಾಗಿ ಸತೀಶ ಶಿರ್ಲಾಲು (ದ್ವಾಪರ), ರವೀಂದ್ರದರ್ಬೆ ( ಕಲಿ) ಪ್ರದೀಪ ಹೆಬ್ಬಾರ್ ಚಾರ( ಸುಬಲ,ಶುಭಾಂಗಿ), ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ (ನಾರದ, ಶುನಶೇಪ), ಶ್ರುತಿ ವಿಸ್ಮಿತ್ (ಗಾಂಧಾರಿ), ಜಯರಾಮ ನಾಲ್ಗುತ್ತು(ಶಿವಭಟ್ಟ), ಶ್ರೀಧರ ಎಸ್ಪಿ ಸುರತ್ಕಲ್ (ಶಕುನಿ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಹರಿ, ಭೀಷ್ಮ) ಭಾಗವಹಿಸಿದ್ದರು.
ಅನಂತ ರಾಮ ಬಂಗಾಡಿ ವಿರಚಿತ ಗಾಂಧಾರಿ ಪ್ರಸಂಗದ ಈ ತಾಳಮದ್ದಳೆಯನ್ನು ಸಂಘದ ಉಪಾಧ್ಯಕ್ಷರಾದ ಸಂಜೀವ ಅನುಗ್ರಹ ಪಾರೆಂಕಿ ಪ್ರಾಯೋಜಿಸಿದ್ದರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ವಂದಿಸಿದರು.