ಚೆನ್ನೈ : ಆಸ್ಕರ್ ಪ್ರಶಸ್ತಿ ವಿಜೇತ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ಗೆ ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎ.ಆರ್ ರೆಹಮಾನ್ ಅವರಿಗೆ ಇಂದು ಬೆಳಗ್ಗೆ ಹಠಾತ್ತನೆ ಎದೆ ನೋವು ಕಾಣಿಸಿಕೊಂಡಿದ್ದು, ಶೀಘ್ರವೇ ಅವರನ್ನು ಚೆನ್ನೈಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ 7.30ಕ್ಕೆ ಎಆರ್ ರೆಹಮಾನ್ ಆಸ್ಪತ್ರೆಗೆ ಬಂದಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಎ.ಆರ್ ರೆಹಮಾನ್ ಅವರಿಗೆ ಇಸಿಜಿ ಸೇರಿದಂತೆ ಹಲವು ಬೇರೆ ಬೇರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅವರ ಹೃದಯನಾಳದ ಕೆಲವೆಡೆ ಬ್ಲಾಕ್ಗಳು ಇರುವುದು ಪರೀಕ್ಷೆಗಳಿಂದ ತಿಳಿದುಬಂದಿದ್ದು, ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಕೆಲ ದಿನ ಆಸ್ಪತ್ರೆಯಲ್ಲಿಕಳೆಯಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಎ.ಆರ್ ರೆಹಮಾನ್ ಅವರಿಗೆ ಈಗ 58 ವರ್ಷ ವಯಸ್ಸಾಗಿದೆ. ಇತ್ತೀಚೆಗಷ್ಟೆ ಅವರು ಪತ್ನಿ ಸಾಯಿರಾಬಾನು ಅವರಿಂದ ದೂರಾಗಿದ್ದಾರೆ. ರೆಹಮಾನ್ ಪುತ್ರ ಮತ್ತು ಪುತ್ರಿ ಇಬ್ಬರೂ ಗಾಯಕರೇ ಆಗಿದ್ದಾರೆ. ಎ.ಆರ್ ರೆಹಮಾನ್ ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಗಾಯಕ ಎಡ್ ಶಿರನ್ ಜೊತೆ ಲೈವ್ ಕಾನ್ಸರ್ಟ್ನಲ್ಲಿ ಭಾಗಿ ಆಗಿದ್ದರು. ಈಗಲೂ ಹಲವಾರು ಸಿನಿಮಾಗಳು ಎ.ಆರ್ ರೆಹಮಾನ್ ಕೈಯಲ್ಲಿವೆ. ರಾಮ್‌ಚರಣ್, ಜಾನ್ಹವಿ ಹಾಗೂ ಶಿವಣ್ಣ ನಟಿಸಲಿರುವ ಪೆದ್ದಿ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ ರೆಹಮಾನ್. ಅದರ ಹೊರತಾಗಿ ಇನ್ನೂ ಹಲವು ಸಿನಿಮಾಗಳು ಎ.ಆರ್ ರೆಹಮಾನ್ ಅವರ ಕೈಯಲ್ಲಿವೆ.
ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅಸ್ವಸ್ಥ : ಆಸ್ಪತ್ರೆಗೆ ದಾಖಲು
