ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧೀಕಾರ(ಪೂಡಾ)ದ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರರವರ ಶನಿವಾರ ಅಧಿಕಾರ ಸ್ವೀಕರಿಸಿದರು.
ನೂತನ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಗ್ರಾಮಾಂತರ ಪ್ರದೇಶಗಳ 9/11 ನೀಡುವ ಕೆಲಸ ಮುಖಾಂತರ ನಡೆಯಬೇಕಿದ್ದು ಯಾವುದೇ ಅರ್ಜಿಗಳು ಒಂದು ವಾರಕ್ಕಿಂತ ಹೆಚ್ಚು ಕಾಲ ಪೂಡಾ ಕಚೇರಿಯಲ್ಲಿ ಉಳಿಯಬಾರದು. ಬಡವರ ಬಗ್ಗೆ ಕಾಳಜಿ ಇರಲಿ. ಅವರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕು. ಅದಿಕಾರಿಗಳು ವಾರದಲ್ಲಿ ಎರಡು ದಿನ ಮಾತ್ರ ಬರುತಿದ್ದು ಉಳಿದ ದಿನಗಳಲ್ಲಿ ಸದಸ್ಯರ ಮುಖಾಂತರ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕಚೇರಿಗೆ ಬರುವವರಿಗೆ ಯಾವುದೇ ತೊಂದರೆ ಇಲ್ಲದಂತೆ ಭ್ರಷ್ಠಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು. ನಗರದ ಅಭಿವೃದ್ಧಿ ಬಗ್ಗೆ ಮಾಸ್ಟರ್ ಪ್ಲಾನ್ ಅಗಬೇಕು. ಲೇ ಔಟ್, ರಿಯಲ್ ಎಸ್ಟೇಟ್, ಉದ್ಯಮಗಳಿಂದ ತೆರಿಗೆ ಬರುತ್ತಿದ್ದು ಅದಕ್ಕೆ ಪೂರಕವಾಗಿಯೂ ಕಾರ್ಯನಿರ್ವಹಿಸಬೇಕು ಎಂದ ಹೇಳಿದರು.
ಅಧಿಕಾರ ಸ್ವೀಕರಿಸಿದ ಅಮಳ ರಾಮಚಂದ್ರ ಮಾತನಾಡಿ, ಶಾಸಕರ ಮುಖಾಂತರ ಸರಕಾರದಿಂದ ಪೂಡಾದ ಜವಾಬ್ದಾರಿ ತನಗೆ ವಹಿಸಿದ್ದಾರೆ. ಉತ್ತಮವಾಗಿ, ಬಡವರ ಕೆಲಸಗಳನ್ನು ನಡೆಸುವಂತೆ ಶಾಸಕರು ಕಿವಿಮಾತು ಹೇಳಿದ್ದು ಅವರ ಮಾತಿಗೆ ಚ್ಯುತಿ ಬಾರದಂತೆ ಶಿರಸಾ ಪಾಲಿಸಲಾಗುವುದು. ತನ್ನ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಅಗದಂತೆ ಶೇ.100 ರಷ್ಟು ಬದ್ಧವಾಗಿ ಅಧಿಕಾರ ನಡೆಸಲಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಮಾಜಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಧಾರ್ಮಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪೂಡಾ ಸದಸ್ಯ ಅನ್ವರ್ ಖಾಸಿಂ, ಉದ್ಯಮಿ ಶಿವರಾಮ ಆಳ್ವ, ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ, ಪೂಡಾ ಮಾಜಿ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ವಿಎಚ್‌ಎ ಶಕೂರ್ ಹಾಜಿ, ರವೀಂದ್ರ ನೆಕ್ಕಿಲು, ಕೌಶಲ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ರಮಾನಾಥ ವಿಟ್ಲ, ಗಂಗಾಧರ ಗೌಡ ಕೆಮ್ಮಾರ, ವೇದನಾಥ ಸುವರ್ಣ, ಸುಭಾಸ್ ಬೆಳ್ಳಿಪ್ಪಾಡಿ, ಶರೂನ್ ಸಿಕ್ವೇರಾ, ಶಶಿಕಿರಣ್ ರೈ ನೂಜಿಬೈಲು ಸೇರಿದಂತೆ ಹಲವು ಮಂದಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಆಗಮಿಸಿ, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪೂಡಾದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿ, ವಂದಿಸಿದರು.