ಕುದ್ಮಾರು : ಶ್ರೀ ಬ್ರಹ್ಮಬೈದೆರುಗಳ ಗರಡಿ , ಕೆಲಂಬೀರಿ ಕುದ್ಮಾರುವಿನಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಶ್ರೀ ಕೊಡಮಣಿತ್ತಾಯ ನೇಮೋತ್ಸವ ನಡೆಯಿತು.
ಬಳಿಕ ಶ್ರೀ ಬ್ರಹ್ಮಬೈದೆರುಗಳ ನೇಮೋತ್ಸವ ನಡೆಯಲಿದ್ದು, ಸಂಜೆ 4 ಗಂಟೆಗೆ ಶ್ರೀ ಬ್ರಹ್ಮಬೈದೆರುಗಳ ಭಂಡಾರ ತೆಗೆಯುವುದು, ರಾತ್ರಿ 6 ಗಂಟೆಗೆ ಪಂಚಲಿಂಗೇಶ್ವರ ಕುಣಿತ ಭಜನಾ ಮಕ್ಕಳ ತಂಡ, ಕುದ್ಮಾರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 7ರಿಂದ ಗರಡಿಯಲ್ಲಿ ಗಂಧಪ್ರಸಾದ ವಿತರಣೆ, ರಾತ್ರಿ 8:30 ಅನ್ನಸಂತರ್ಪಣೆ, ಇಂದು ರಾತ್ರಿ 9 ಗಂಟೆಗೆ ಶ್ರೀ ಬ್ರಹ್ಮಬೇದೆರುಗಳ ಗರಡಿ ಇಳಿಯುವುದು, ರಾತ್ರಿ 9:30ಕ್ಕೆ ಸಿಡಿಮದ್ದು ಪ್ರದರ್ಶನ, ರಾತ್ರಿ 1 ಗಂಟೆಗೆ ಮಾಣಿ ಬಾಲೆ ಗರಡಿ ಇಳಿಯುವುದು, ಪ್ರಾತಃ ಕಾಲ ಬೈದೆರುಗಳ ಪಾತ್ರಿಗಳ ಸೇಠ್ ನಡೆಯಲಿದೆ.
ಮಾ.16ರಂದು ಬೆಳಗ್ಗೆ ಬೈದೆರುಗಳ ಸೇಠ್ ಹಾಗೂ ಬೆಳಗ್ಗೆ ಬಟ್ಟಲು ಕಾಣಿಕೆ ಮತ್ತು ಗಂಧಪ್ರಸಾದ ವಿತರಣೆ
ಭಕ್ತರೆಲ್ಲ ಆಗಮಿಸಿ ದೈವದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.