ಗಗನ ಯಾತ್ರಿ ಸುನೀತಾ ವಿಲ್ಲಿಯಮ್ಸ್‌ರನ್ನು ಭೂಮಿಗೆ ಕರೆತರುವ ಕಾರ್ಯಾಚರಣೆ ಶುರು

ಒಂಬತ್ತು ತಿಂಗಳಿಂದ ಅಂತರಿಕ್ಷದಲ್ಲಿ ಬಾಕಿಯಾಗಿರುವ ಭಾರತೀಯ ಮೂಲದ ಖಗೋಲ ವಿಜ್ಞಾನಿ

ವಾಷಿಂಗ್ಟನ್: ಗಗನಯಾತ್ರಿ ಸುನೀತಾ ವಿಲ್ಲಿಯಮ್ಸ್‌ ಅವರ ಅಂತರಿಕ್ಷ ವಾಸಕ್ಕೆ ಕೊನೆಗೂ ಮುಕ್ತಿ ಸಿಗುವ ಗಳಿಗೆ ಸನ್ನಿಹಿತವಾಗಿದೆ. ತಾಂತ್ರಿಕ ಅಡಚಣೆಗಳಿಂದಾಗಿ ಸುಮಾರು 9 ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆಯನ್ನು ನಾಸಾ ಮರಳಿ ಪ್ರಾರಂಭಿಸಿದೆ.
ಅಮೆರಿಕ ಬ್ಯಾಹ್ಯಾಕಾಶ ಸಂಸ್ಥೆ (ನಾಸಾ) ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಡಿ, ‘ಕ್ರ್ಯೂ 9 ಮಿಷನ್’ ಎಂಬ ಕಾರ್ಯಾಚರಣೆ ಆರಂಭಿಸಲಾಗಿದೆ.
ಕಳೆದ ವರ್ಷ ಜೂನ್‌ನಲ್ಲಿ ಕೇವಲ 8 ದಿನಗಳ ಮಿಷನ್‌ ಮೇಲೆ ಭೂಮಿಯಿಂದ ಕೇವಲ 408 ಕಿ.ಮೀ. ಮೇಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ಈ ಇಬ್ಬರು ವಿಜ್ಞಾನಿಗಳು ತೆರಳಿದ್ದರು. ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ಕ್ಯಾಪ್ಸೂಲ್‌ನಲ್ಲಿ ಐಎಸ್ಎಸ್‌ಗೆ ಪ್ರಯಾಣಿಸಿದ್ದ ಅವರು, ಅಲ್ಲಿ 8 ದಿನಗಳ ಮಿಷನ್‌ ಮುಗಿಸಿ ಅದೇ ಕ್ಯಾಪ್ಸೂಲ್‌ನಲ್ಲಿ ಭೂಮಿಗೆ ಬಂದಿಳಿಯಬೇಕಿತ್ತು. ಆದರೆ ಕ್ಯಾಪ್ಸೂಲ್‌ನಲ್ಲಿ ತಾಂತ್ರಿಕ ಅಡಚಣೆ ಕಾಣಿಸಿಕೊಂಡ ತಾಂತ್ರಿಕ ಅಡಚಣೆಗಳಿಂದಾಗಿ ಅವರು ಅಲ್ಲಿಯೇ ಉಳಿಯಬೇಕಾಯಿತು. ಅಲ್ಲಿಂದಲೇ ಅವರು ಅಮೆರಿಕ ಚುನಾವಣೆಗೆ ಮತದಾನ ಮಾಡಿದ್ದರು. ಅದೊಂದು ದಿನ 24 ಗಂಟೆಗಳಲ್ಲಿ 16 ಸೂರ್ಯೋದಯಗಳಿಗೂ ಸಾಕ್ಷಿಯಾಗಿದ್ದರು.
ಸುನೀತಾ ಅವರನ್ನು ಭೂಮಿಗೆ ವಾಪಸ್ ಬಂದರೂ ಅವರಿಗೆ ಹಲವಾರು ಸವಾಲುಗಳು ಎದುರಾಗಲಿವೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರು ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರಗಿದ್ದಾರೆ. ಸ್ಪೇಸ್ ಎಕ್ಸ್ ರಾಕೆಟ್‌ನಲ್ಲಿ ವಾಪಸ್ ಬರುವಾಗ ಅವರು ಭೂಮಿಯ ಗುರುತ್ವಾಕರ್ಷಣೆಗೆ ಒಳಗಾಗುತ್ತಾರೆ. ಆಗ ಅವರ ದೇಹದಲ್ಲಿ ಹಲವಾರು ಬದಲಾವಣೆಗಳಾಗಲಿವೆ. ಸುಮಾರು 9 ತಿಂಗಳುಗಳ ಕಾಲ ಭೂಮಿಯ ಗುರುತ್ವಾಕರ್ಷಣೆಯಿಂದ ದೂರ ಉಳಿದಿದ್ದ ಅವರಿಗೆ ಬೇಬಿ ಫೂಟ್ ಎಂಬ ಹೊಸ ರೀತಿಯ ಸಮಸ್ಯೆ ಕಾಡಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಬೇಬಿ ಫೂಟ್ ಎಂದರೆ ಮೃದು ಪಾದ. ತಿಂಗಳಾನುಗಟ್ಟಲೆ ಗುರುತ್ವಾಕರ್ಷಣೆಯಿಂದ ಹೊರಗಿದ್ದ ಕಾರಣ ಅವರ ಪಾದಗಳು ತೀರಾ ಮೃದುವಾಗಿರುತ್ತವೆ. ಬರಿ ಪಾದದಲ್ಲಿ ಅವರು ಮನೆಯಲ್ಲೂ ಕೆಲವು ದಿಗನಳ ಕಾಲ ನಡೆದಾಡುವಂತಿಲ್ಲ. ಹಾಗಾಗಿ ಭೂಮಿಗೆ ಬಂದ ಕೂಡಲೇ ಅವರನ್ನು ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಶುಶ್ರೂಷೆ ಮಾಡಲಾಗುತ್ತದೆ. ಅವರ ಪಾದ ಸಹಜ ಸ್ಥಿತಿಗೆ ಮರಳುವುದಷ್ಟೇ ಅಲ್ಲ, ಭೂಮಿಗೆ ಬಂದ ನಂತರ ಅವರ ರಕ್ತದೊತ್ತಡ ಹಾಗೂ ದೇಹದ ಮೇಲಾಗುವ ಪರಿಣಾಮಗಳನ್ನು ನೋಡಿಕೊಂಡು ಅದಕ್ಕೆ ತಕ್ಕಂತೆ ಅವರಿಗೆ ಚಿಕಿತ್ಸೆ ನೀಡಿ ಅವರು ಸಂಪೂರ್ಣವಾಗಿ ಭೂಮಿಯಿಂದ ಹೋಗುವುದಕ್ಕಿಂತ ಮುಂಚೆ ಇದ್ದಂಥ ಸಹಜ ಸ್ಥಿತಿಗೆ ಬಂದ ಮೇಲೆಯೇ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.

 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top