ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬೇಕು ಎನ್ನುವ ಉದ್ದೇಶದಿಂದ ಪುತ್ತೂರಿನ ಪ್ರೇರಣಾ ಸಂಸ್ಥೆಯಲ್ಲಿ ಮಾರ್ಚ್ 4ರಂದು ಐಎಎಸ್ ಉಚಿತ ಓರಿಯಂಟೇಷನ್ ತರಗತಿ ನಡೆಯಿತು.
ಇಂಡಿಯನ್ ಕಾರ್ಪೋರೇಟ್ ಲಾ ಸರ್ವೀಸಿನ 2019ರ ಬ್ಯಾಚಿನ ಅಧಿಕಾರಿ ವೆಂಕಟ್ರಮಣ್ ಕಾವಾಡಿಕೇರಿ, ಐ.ಸಿ.ಎಲ್.ಎಸ್. ಅವರು ಸಂಪನ್ಮೂಲ ವ್ಯಕ್ತಿಯಾಗಿ, ಓರಿಯಂಟೇಷನ್ ತರಗತಿ ನಡೆಸಿಕೊಟ್ಟರು. ಪ್ರೇರಣಾದೊಂದಿಗೆ ಜೊತೆಯಾಗಿರುವ ಇಂಡಿಯಾ ಫೋರ್ ಐಎಎಸ್ ಸಂಸ್ಥೆ, ಐಎಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡಲಿದೆ.
140ಕ್ಕೂ ಅಧಿಕ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೀಡಿರುವ ಪ್ರತಿಷ್ಠಿತ ಇಂಡಿಯ ಫೋರ್ ಐಎಎಸ್ ಸಂಸ್ಥೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಐಎಎಸ್ ಪರೀಕ್ಷೆಗೆ ಹುರಿಗೊಳಿಸಲು ಸಿದ್ಧವಾಗಿದೆ.
ಎನ್.ಸಿ.ಇ.ಆರ್.ಟಿ. ಕ್ಲಾಸ್, ಪ್ರಚಲಿತ ವಿದ್ಯಮಾನಗಳ ತರಗತಿಗಳು, ಆಪ್ಟಿಟ್ಯೂಡ್ ಕ್ಲಾಸ್ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಿದ್ದು, ಇಂಗ್ಲೀಷ್ ಭಾಷೆಯ ಬ್ರಿಡ್ಜ್ ಕೋರ್ಸ್ ಮತ್ತು ಬರವಣಿಗೆಯ ಕೌಶಲ್ಯದ ಬಗ್ಗೆಯೂ ಮಾಹಿತಿ ನೀಡಲಾಯಿತು.
2024ರ ಐಎಎಸ್ ಪರೀಕ್ಷೆಯನ್ನು ಗುರಿಯಾಗಿಸಿಕೊಂಡು, ಕೋರ್ಸ್ ಆರಂಭಿಸಲಾಗಿದೆ. ಹಾಗಾಗಿ ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಯಿಸುವ ಗುರಿ ಇಟ್ಟುಕೊಂಡಿರುವವರು ತರಗತಿಗಳಿಗೆ ಆಗಮಿಸಿದ್ದರು.