ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ , ಉದ್ಯೋಗ ಸೃಷ್ಟಿಯೇ ಮುಖ್ಯ : ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ

ಉಚಿತ ಕೊಡುಗೆಗಳನ್ನು ನೀಡೋದ್ರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ, ಅವಿಷ್ಕಾರದ ಮೂಲಕ ಉದ್ಯೋಗ ಸೃಷ್ಟಿಯೇ ಮುಖ್ಯ ಎಂದು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯವರು ಹೇಳಿದ್ದಾರೆ.

ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಸನ್ ಸೆಂಟರ್‌ನಲ್ಲಿ ಮಾ.12ರಂದು ನಡೆದ ಟ್ರೈ ಕಾನ್ ಮುಂಬೈ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಚಿತ ಕೊಡುಗೆಗಳಿಂದ ಬಡತನ ನಿವಾರಣೆಯಾಗುವುದಿಲ್ಲ ಎಂದರು. ಅವಿಷ್ಕಾರದಿಂದ ಹೆಚ್ಚು ಉದ್ಯೋಗ ಸೃಷ್ಟಿಯಾದಾಗ ಮಾತ್ರ ಬಡತನ ದೂರವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ಮಾಜಿ NASSCOM ಅಧ್ಯಕ್ಷ ಹರೀಶ್ ಮೆಹ್ರಾ ಉಪಸ್ಥಿತರಿದ್ದರು.

“ಉಚಿತ ಕೊಡುಗೆಗಳಿಂದ ಬಡತನವನ್ನು ನೀವು ಪರಿಹರಿಸಲು ಸಾಧ್ಯವಿಲ್ಲ. ಯಾವುದೇ ದೇಶವು ಅದನ್ನು ಮಾಡಲು ಸಾಧ್ಯವಾಗಿಲ್ಲ. ನಿಮ್ಮ ಅವಿಷ್ಕಾರದಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿದಾಗ ಬಡತನ ಮಾಯವಾಗುತ್ತದೆ ಎಂದು ನಾರಾಯಣ ಮೂರ್ತಿ ಬಡತನ ನಿರ್ಮೂಲನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 
 

ಹೊಸ ಚರ್ಚೆಗೆ ಎಡೆಮಾಡಿಕೊಟ್ಟ ಹೇಳಿಕೆ

ನಾರಾಯಣ ಮೂರ್ತಿಯವರ ಈ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ದಾರಿ ಮಾಡಿದೆ. ಜನರು ಉಚಿತ ಕೊಡುಗೆಗಳ ಬಗ್ಗೆ ಚಿಂತಿಸಬೇಕಾಗಿದೆ. ಬಡತನ ನಿರ್ಮೂಲನೆಗೆ ದೀರ್ಘಕಾಲಿನ ಪರಿಹಾರಗಳನ್ನು ಕಂಡುಕೊಳ್ಳುವುದು ಮುಖ್ಯ ಎಂದು ಮೂರ್ತಿಯವರು ಒತ್ತಿ ಹೇಳಿದ್ದಾರೆ. ಹೀಗಾಗಿ ಈಗಾಗಲೇ ಐದು ಪ್ರೀ ಗ್ಯಾರಂಟಿಗಳನ್ನು  ನೀಡುತ್ತಿರುವ ಕರ್ನಾಟಕದಂತಹ ರಾಜ್ಯಗಳ ನಡೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

ಬಂಡವಾಳಶಾಹಿ ಸಮಾಜವಾದದ ಬಗ್ಗೆ ಅಭಿಪ್ರಾಯ

ನಾರಾಯಣ ಮೂರ್ತಿಯವರು ಬಂಡವಾಳಶಾಹಿ ಮತ್ತು ಸಮಾಜವಾದದ ಬಗ್ಗೆಯೂ ಮಾತನಾಡಿದರು. ಅನುಕಂಪದ ಬಂಡವಾಳಶಾಹಿ ಎಂದರೆ ಮನಸ್ಸಿನಲ್ಲಿ ಬಂಡವಾಳಶಾಹಿ ಆದರೆ ಹೃದಯದಲ್ಲಿ ಸಮಾಜವಾದ ಎಂದು ಅವರು ವಿವರಿಸಿದರು.

“ದೀರ್ಘಕಾಲದವರೆಗೆ ಸಮಾಜವಾದವನ್ನು ಅಳವಡಿಸಿಕೊಂಡಿರುವ ಭಾರತದಂತಹ ದೇಶದಲ್ಲಿ ಇದು ಸಾಧ್ಯವಿಲ್ಲ. ಅನುಕಂಪದ ಬಂಡವಾಳಶಾಹಿ ಉದ್ಯೋಗಿಗಳನ್ನು ಮನುಷ್ಯರೆಂದು ನೋಡುತ್ತದೆ. ಭಾರತದಂತಹ ದೇಶದಲ್ಲಿ ದೀರ್ಘಕಾಲ ಸಮಾಜವಾದ ಅಸ್ತಿತ್ವದಲ್ಲಿದ್ದಲ್ಲಿ, ಬಂಡವಾಳಶಾಹಿಯ ಬಗ್ಗೆ ಸಂಶಯವಿರುತ್ತದೆ” ಎಂದು ಅವರು ಹೇಳಿದರು. ಇದು ಸಮಾಜದಲ್ಲಿ ಚರ್ಚೆಗೆ ಕಾರಣವಾಗಿದೆ.

ಇದಲ್ಲದೆ, ಉದ್ಯಮಿಗಳು Al ಅನ್ನು ಸಹಾಯಕ ರೀತಿಯಲ್ಲಿ ಬಳಸುವುದು ಮತ್ತು ನಮ್ಮ ಆದಾಯವನ್ನು ಹೆಚ್ಚಿಸಲು Al ಅನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಯೋಚಿಸಬೇಕೆಂದು ಮೂರ್ತಿಯವರು ಒತ್ತಾಯಿಸಿದರು.

‘ಭಾರತದಲ್ಲಿ ಎಲ್ಲದರಲ್ಲೂ Al ಬಗ್ಗೆ ಮಾತನಾಡುವುದು ಒಂದು ಫ್ಯಾಷನ್ ಆಗಿದೆ. ಅಲ್ಲಾರಿದಮ್ಗಳು ಮಾನವ ಸಾಮರ್ಥ್ಯಗಳನ್ನು ಅನುಕರಿಸುವ ಉತ್ತಮ ಅವಕಾಶಗಳನ್ನು ಹೊಂದಿರುತ್ತವೆ. ನಾನು ಈಗ ನೋಡುತ್ತಿರುವ ಹೆಚ್ಚಿನ AI ಹಳೆಯ ಕಾರ್ಯಕ್ರಮಗಳು ಎಂದು ಅವರು ಹೇಳಿದರು. ಇದು ।। ಕ್ಷೇತ್ರದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಮೂರ್ತಿಯವರ ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಬಡತನ ನಿರ್ಮೂಲನೆ, ಬಂಡವಾಳಶಾಹಿ ಮತ್ತು ಸಮಾಜವಾದ, Al ಬಳಕೆ ಮುಂತಾದ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳು ಜನರಲ್ಲಿ ಚಿಂತನೆಗೆ ಕಾರಣವಾಗಿವೆ. ಅಲ್ಲದೆ ಅತಿಯಾದ ಎಐ ಗಮನವು ಒಳಿತಲ್ಲ ಎಂಬ ಸಾರವೂ ಇದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top