ಮಂಗಳೂರು: ನೆರಮನೆ ನಿವಾಸಿಗಳ ಜಗಳದಿಂದ ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆಸಿ, ಕೊಲೆ ಮಾಡುವ ಯತ್ನಿಸಿದ ಘಟನೆ ಮಂಗಳೂರು ನಗರದ ಬಿಜೈ ಕಾಪಿಕಾಡ್ ನಲ್ಲಿ ನಡೆದಿದೆ.
ಅಕ್ಕಪಕ್ಕದ ಮನೆನಿವಾಸಿಗಳ ಸತೀಶ್ ಮತ್ತು ಮುರಳಿ ಪ್ರಸಾದ್ ನಡುವೆ ಆಗಾಗ ಜಗಳ ಉಂಟಾಗುತ್ತಿದ್ದು ಮುರಳಿ ಪ್ರಸಾದ್ ಅವರು ಚಲಾಯಿಸುತ್ತಿದ್ದ ಬೈಕ್ ಗೆ ತನ್ನ ಕಾರನ್ನು ಡಿಕ್ಕಿ ಹೊಡೆಸಿ ಸತೀಶ್ ಕೊಲೆಗೆ ಯತ್ನಿಸಿದ್ದಾನೆ.
ಸತೀಶ್ ಮಾರುತಿ 800 ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆಸಿದ ರಭಸಕ್ಕೆ ಪಾದಾಚಾರಿ ಮಹಿಳೆಯೊಬ್ಬರಿಗೂ ಡಿಕ್ಕಿ ಹೊಡೆದಿದ್ದು ಕಾರ್ ನೇಗಕ್ಕೆ ಮಹಿಳೆ ಕಾಂಪೌಂಡ್ ಗೋಡೆಗೆ ಎಸೆಯಲ್ಪಟ್ಟಿದ್ದಾರೆ. ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನೆಯಿಂದಾಗಿ ಮುರುಳಿಪ್ರಸಾದ್ ಮತ್ತು ಪಾದಾಚಾರಿ ಮಹಿಳೆಗೆ ಗಾಯಗಳಾಗಿದೆ.