ನಟಿ ಸೌಂದರ್ಯ ಸಾವಿಗೆ ಈ ನಟನೇ ಕಾರಣವಂತೆ

ನಟಿ ಸತ್ತು 21 ವರ್ಷಗಳ ಬಳಿಕ ದಾಖಲಾಯಿತು ದೂರು

ಬೆಂಗಳೂರು: ಕನ್ನಡದ ಮೋಹಕ ನಟಿ ಸೌಂದರ್ಯಾ ಹೆಲಿಕಾಪ್ಟರ್‌ ಅಪಘಾತದಲ್ಲಿ ತೀರಿಕೊಂಡು 20 ವರ್ಷಗಳೇ ಕಳೆದಿವೆ. ಈಗ ಅವರ ಸಾವಿನ ಬಗ್ಗೆ ಪ್ರಕಣವೊಂದು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ತೆಲುಗಿನ ಖ್ಯಾತ ನಟ, ನಿರ್ಮಾಪಕ ಮೋಹನ್ ಬಾಬು ಕೈವಾಡ ಇದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಈ ವಿಚಾರ ಸಾಕಷ್ಟು ಈಗ ಸಂಚಲನ ಸೃಷ್ಟಿ ಮಾಡಿದೆ. ಸೌಂದರ್ಯಾ 2004ರ ಏಪ್ರಿಲ್ 17ರಂದು ನಿಧನ ಹೊಂದಿದ್ದಾರೆ. ಅವರಿದ್ದ ಖಾಸಗಿ ಹೆಲಿಕಾಪ್ಟರ್‌ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಹೊತ್ತಿ ಉರಿದು ಅವರ ಜೊತೆ ಸಹೋದರ ಅಮರನಾಥ್ ಕೂಡ ನಿಧನ ಹೊಂದಿದರು. ಈ ಘಟನೆ ನಡೆದು 21 ವರ್ಷಗಳು ಕಳೆದಿವೆ.

ಕೌಟುಂಬಿಕ ಸಮಸ್ಯೆ ಕಾರಣದಿಂದ ಮೋಹನ್ ಬಾಬು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಈಗ ಅವರು ಸೌಂದರ್ಯಾ ಸಾವಿನ ಪ್ರಕರಣದಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಆಂಧ್ರ ಪ್ರದೇಶದ ಖಮ್ಮಾಮ್ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ಸೌಂದರ್ಯಾ ಸಾವಿನ ಹಿಂದೆ ಕೈವಾಡ ಇರುವ ದೂರಲಾಗಿದೆ. ಚಿಟ್ಟಿಮಲ್ಲು ಎಂಬುವವರು ದೂರು ನೀಡಿದ್ದಾರೆ.

 
 

ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಜಾಗದ ವಿಚಾರದಲ್ಲಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್​ನಲ್ಲಿ ಆರು ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ನಿರಾಕರಿಸಿದ್ದರು. ಇದಕ್ಕಾಗಿ ಈ ಕೊಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೌಂದರ್ಯಾ ಸಾವಿನ ಬಳಿಕ ಈ ಜಾಗ ತನಗೆ ಮಾರುವಂತೆ ಅವರ ಕುಟುಂಬದವರಿಗೆ ಮೋಹನ್ ಬಾಬು ಒತ್ತಡ ಹೇರಿದ್ದಾರೆ. ಆ ಬಳಿಕ ಮೋಹನ್ ಬಾಬು ಅಕ್ರಮವಾಗಿ ಈ ಜಾಗವನ್ನು ಪಡೆದುಕೊಂಡರು ಎನ್ನಲಾಗಿದೆ. ದೂರು ನೀಡಿದ ಚಿಟ್ಟಿಮಲ್ಲು ತಮಗೆ ಪೊಲೀಸ್ ರಕ್ಷಣೆ ಬೇಕು ಎಂದು ಕೋರಿದ್ದಾರೆ. ಅಲ್ಲದೆ ಈ ಜಾಗವನ್ನು ಸರ್ಕಾರದವರು ವಶಕ್ಕೆ ಪಡೆದು ಅಗತ್ಯ ಇರುವ ವೃದ್ಧಾಶ್ರಮದವರಿಗೆ ನೀಡುವಂತೆ ಕೋರಿದ್ದಾರೆ.
ಸೌಂದರ್ಯಾ ಕನ್ನಡದ ಜನಪ್ರಿಯ ನಟಿಯಾಗಿದ್ದರು. ಆಪ್ತಮಿತ್ರ ಚಿತ್ರದಲ್ಲಿ ಮಾಡಿದ ನಾಗವಲ್ಲಿ ಪಾತ್ರ ಯಾವಾಗಲೂ ನೆನಪಿನಲ್ಲಿ ಇರುವಂಥದ್ದು. ಅವರು ನಿಧನ ಹೊಂದುವಾಗ ಕೇವಲ 31 ವರ್ಷ ವಯಸ್ಸಾಗಿತ್ತು.
ಸೌಂದರ್ಯ ಕನ್ನಡದ ಜನಪ್ರಿಯ ನಟಿಯಾಗಿದ್ದರು. ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರದಲ್ಲಿ ನಟಿಸಿದ್ದರು. ಕನ್ನಡದ ಆಪ್ತಮಿತ್ರ ಚಿತ್ರದ ನಾಗವಲ್ಲಿ ಪಾತ್ರ ಅವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top