ಮಂಗಳೂರು : ವೇಗವಾಗಿ ಚಲಿಸುತ್ತಿದ್ದ ಬಲೆನೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿ ಪಲ್ಟಿಯಾದ ಘಟನೆ ಮಂಗಳೂರು ಬೆಂದೂರ್ ವೆಲ್ ನ ಬಲ್ಮಠ ಬಳಿ ತಡ ರಾತ್ರಿ ಸಂಭವಿಸಿದೆ.
ರಾತ್ರಿ ವೇಳೆ ಖಾಲಿ ಇರುವ ರಸ್ತೆಯಲ್ಲಿ ಅಪಘಾತವಾಗಿದ್ದರಿಂದ, ಕಾರು ಡಿವೈಡರ್ ಮೇಲೆ ಏರಿ ವಿರುದ್ಧ ದಿಕ್ಕಿನ ರಸ್ತೆಗೆ ಬಿದ್ದರೂ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ.
ಕಾರಿನಲ್ಲಿದ್ದವರ ಮಾಹಿತಿ ತಿಳಿಯಬೇಕಿದೆ.