ತೊಕ್ಕೊಟ್ಟು : ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೆ.ಸಿ. ಅಬ್ದುಲ್ ಆಜೀಜ್ (42) ಹೃದಯಾಘಾತದಿಂದ ಬುಧವಾರ ಸಂಜೆ ನಿಧಾನರಾದರು.
ಮುಂಬಯಿಗೆ ತೆರಳಿದ್ದ ಅವರು ರೈಲಿನಲ್ಲಿ ವಾಪಾಸಾಗುತ್ತಿದ್ದಾಗ ಕುಮಟಾ ಬಳಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು.
ಕುತ್ತಾರು ಮದನಿ ನಗರದ ನಿವಾಸಿಯಾಗಿದ್ದ ಅಬ್ದುಲ್ ಆಜೀಜ್ ರಸ್ತೆ ನಿರ್ಮಾಣ ಗುತ್ತಿಗೆ ಸಂಸ್ಥೆ ಆರ್ ಕೆ ಸಿ ಕನ್ಸ್ಟ್ರಕ್ಷನ್ ಸಂಸ್ಥೆಯ ಮಾಲಕರ ಪುತ್ರರಾಗಿದ್ದ ಅವರು ಉದ್ಯಮಿಯಾಗಿ ಯುವಕರಿಗೆ ಹೊಸ ಹೊಸ ಉದ್ಯೋಗವಕಾಶ ಕಲ್ಪಿಸಿ ಕೊಟ್ಟಿದ್ದರು. ತನ್ನ ಮಾಲೀಕತ್ವದಲ್ಲಿದ್ದ ನಾಟೇಕಲ್ ಸಮೀಪದ ಹಲವು ಸ್ಟಾಲ್ ಗಳಿದ್ದ ಫುಡ್ ಸೆಂಟರ್ ಗೆ ಬುರ್ಜ್ ಖಲೀಪ ಮಾದರಿಯನ್ನು ನಿರ್ಮಿಸಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವಂತೆ ಮಾಡಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.