ಕಡಬ,ಮಾ.5: ಕಡಬ ಠಾಣಾ ವ್ಯಾಪ್ತಿಯ ಅಡ್ಡಗದ್ದೆ ಎಂಬಲ್ಲಿಂದ ಲಾರಿಯಲ್ಲಿ ಮಣ್ಣು ಸಾಗಿಸಿ ದೇವಸ್ಥಾನದ ಬಳಿ ಹಾಕಿ ರಸ್ತೆಯಲ್ಲಿ ಹೋಗುವಾಗ ನ್ಯೂಸ್ ರಿಪೋರ್ಟರ್ ಎಂದು ಹೇಳಿಕೊಂಡು ಗಣೇಶ್ ಇಡಾಳ ಎಂಬಾತ ಲಾರಿ ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಕಡಬ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಚಿದ್ಗಲ್ ನಿವಾಸಿ ಪ್ರವೀಣ್ ಕುಮಾರ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಪ್ರವೀಣ್ ಕುಮಾರ್ ಲಾರಿ ಚಾಲಕನಾಗಿ ದುಡಿಯುತ್ತಿದ್ದು, ಮಂಗಳವಾರ ರಾತ್ರಿ ಕಡಬದ ಅಡ್ಡಗದ್ದೆ ಎಂಬಲ್ಲಿರುವ ರಾಮಣ್ಣ ಎಂಬುವರ ಸೈಟ್‌ನಲ್ಲಿ ಮಣ್ಣು ತುಂಬಿಸಿ ಅಲ್ಲಿಂದ ದೇವಸ್ಥಾನದ ಬಳಿ ಮಣ್ಣು ಹಾಕಿ ರಸ್ತೆಯಲ್ಲಿ ಹೋಗುವ ಸಂದರ್ಭ ಲಾರಿಯನ್ನು ತಡೆದು ನಿಲ್ಲಿಸಿರುವ ಕಡಬ ತಾಲೂಕು ಪೆರಾಬೆ ಗ್ರಾಮದ ಇಡಾಳ ನಿವಾಸಿ ಗಣೇಶ್ ಇಡಾಳ ಎಂಬಾತ ನೀವು ಯಾಕೇ ಮಣ್ಣು ತುಂಬಿಸಿ ರಸ್ತೆಯಲ್ಲಿ ಹೋಗುತ್ತಿರಾ ಎಂದು ಪ್ರಶ್ನಿಸಿ ಅಕ್ರಮವಾಗಿ ಲಾರಿ ತಡೆದು ನಿಲ್ಲಿಸಿ ನಿಮ್ಮ ಲಾರಿಯನ್ನು ಮುಂದೆ ಚಲಾಯಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಬಗ್ಗೆ ಆತನಿಗೆ ವಿಚಾರಿಸಿದಾಗ ನಾನು ಗಣೇಶ್ ಇಡಾಳ ನ್ಯೂಸ್ ರಿಪೋರ್ಟರ್ ಎಂದು ಬೆದರಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ. ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.