ಪುತ್ತೂರು: ಕೇಂದ್ರ ಪುರಸ್ಕೃತ “ಅಮೃತ್ ಮಿತ್ರ 2.0 ಯೋಜನೆ”ಯಡಿ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರುಗಳಿಗೆ ಉದ್ಯಾನವನಗಳ ನಿರ್ವಹಣೆ ಮತ್ತು ಉಸ್ತುವಾರಿ ಕುರಿತಾದ ಒಂದು ದಿನದ ತರಬೇತಿ ಕಾರ್ಯಕ್ರಮ ಪುತ್ತೂರು ನಗರಸಭೆ ಕಾರ್ಯಲಯದಲ್ಲಿ ಮಂಗಳವಾರ ನಡೆಯಿತು.
ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸಸಿಗೆ ನೀರುಣಿಸುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರಸಭಾ ಉಪಾಧ್ಯಕ್ಷ ಕೆ. ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪ್ರಭಾರ ಪೌರಾಯುಕ್ತ ಶಬರಿನಾಥ್ ರೈ, ಸಹಾಯಕ ಕಾರ್ಯ ಪಾಲಕ ಅಭಿಯಂತರ ಕೆ. ಅರುಣ್, ಕಿರಿಯ ಅಭಿಯಂತರ ಮನೋಜ್ ಕುಮಾರ್, ದ. ಕ. ಜಿಲ್ಲಾ ಡೇ ನಲ್ಮ್ ಅಭಿಯಾನ ಮಿಷನ್ ಮ್ಯಾನೇಜರ್ ಅಚ್ಚುತ ನಾಯಕ್, ಒಕ್ಕೂಟದ ಅಧ್ಯಕ್ಷೆ ಯಮುನಾ, ಉಪಾಧ್ಯಕ್ಷೆ ಪುಷ್ಪವತಿ, ಡೇ ನಲ್ಮ್ ಸಿಆರ್ ಪಿಗಳಾದ ಮಮತ, ಧನ್ಯ, ತಾರಾ ಹಾಗೂ ಸಂತೋಷ ಕುಮಾರ್, ಸ್ವಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಿಎಓ ಜಯಲಕ್ಷ್ಮಿ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು.