ಪುತ್ತೂರು: ಇತಿಹಾಸ ಪ್ರಸಿದ್ಧ ನೆಲ್ಲಿದಡಿ ಗುತ್ತು ಜುಮಾದಿ ಬಂಟ ದೈವಸ್ಥಾನಕ್ಕೆ ಪ್ರವೇಶ ನಿರಾಕರಿಸುತ್ತಿರುವ ಎಮ್‍ಎಸ್‍ಇಝೆಡ್ ಅಧಿಕಾರಿಗಳ ಕೃತ್ಯ ಖಂಡನೀಯ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಷಜಂತು ಕಡಿತಕ್ಕೊಳಗಾದ ಸಾವಿರಾರು ಜನರ ಬಾಳಿಗೆ ಬೆಳಕಾದ ನೆಲ್ಲಿದಡಿ ಗುತ್ತುವಿಗೆ ಇಂತಹ ವಿಷಮ ಪರಿಸ್ಥಿತಿ ಬಂದಿರುವುದು ದುಃಖದ ಸಂಗತಿ.
ತುಳುನಾಡಿಗೆ ಕಲಶ ಪ್ರಾಯದಂತಿರುವ ನೆಲ್ಲಿದಡಿಗುತ್ತಿನ ರಕ್ಷಣೆ ತುಳುವರಾದ ನಮ್ಮೆಲ್ಲರ ಕರ್ತವ್ಯ, ಈ ವಿಷಯದಲ್ಲಿ ರಾಜಕೀಯ ಹಾಗು ಜಾತಿ ಭೇದ ಮರೆತು ಒಂದಾಗಿ ನಿಂತು ನೆಲ್ಲಿದಡಿ ಗುತ್ತುವಿನ ರಕ್ಷಣೆಗೆ ಕಟಿಬದ್ಧರಾಗೋಣ ಎಂದು ಅವರು ತಿಳಿಸಿದ್ದಾರೆ.