ಬಂಟ್ವಾಳ : ಏ.1 ರಿಂದ 4 ರ ತನಕ ನಡೆಯಲಿರುವ ಬಂಗೇರ ಕುಟುಂಬಸ್ಥರ ತರವಾಡು ಮನೆಯ ಗೃಹಪ್ರವೇಶ ಮತ್ತು ದೈವಗಳ ಪುನರ್ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆಯನ್ನು ಇಂದು ಬೆಳಿಗ್ಗೆ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಬೆಳಿಗ್ಗೆ 10 ಗಂಟೆಗೆ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಂಗೇರ ಕುಟುಂಬಸ್ಥರ ತರವಾಡು ಮನೆಯ ಮುಖ್ಯಸ್ಥರಾದ ಅಣ್ಣಿ ಪೂಜಾರಿ ಕುದ್ಕೋಳಿ, ನಾರಾಯಣ ಪೂಜಾರಿ ಕೈರೋಳಿ, ರಂಜಿತ್ ಕುಮಾರ್ ಕೆಲಿಂಜ, ಸದಸ್ಯರು ಉಪಸ್ಥಿತರಿದ್ದರು.
ಏ.1 ಮಂಗಳವಾರ ರಾತ್ರಿ 9 ಕ್ಕೆ ವಾಸ್ತುಪೂಜೆ, ಅನ್ನಸಂತರ್ಪನೆ ಜರಗಲಿದೆ. ಏ.2 ಬುಧವಾರ ಮಂತ್ರದೇವತೆ, ಹಿರಿಯಜ್ಜ, ಬಂಟ ದೈವ, ಕುಪ್ಪೆಟ್ಟು ಕಲ್ಲುರ್ಟಿ ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ರಾಹು ಗುಳಿಗ ದೈವಗಳ ಪ್ರತಿಷ್ಠೆ, ನಾಗದೇವರಿಗೆ ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವೆಂಕಟರಮಣ ದೇವರಿಗೆ ಮುಡಿಪು, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ ಜರಗಲಿದೆ. ಸಂಜೆ 4 ಕ್ಕೆ ಕೆಲಿಂಜ ಕೆಲಿಂಜೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ 6 ಕ್ಕೆ ದೈವಗಳ ಭಂಡಾರ ಏರಿಸುವುದು, ರಾತ್ರಿ 7 ಕ್ಕೆ ದೈವಗಳ ಕೋಲೋತ್ಸವ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಏ.3 ಗುರುವಾರ ಕುರಿತಂಬಿಲ, ಏ.4 ಶುಕ್ರವಾರ ವರ್ಷದ ಪರ್ವ ಸೇವೆ ನಡೆಯಲಿದೆ ಎಂದು ಬಂಗೇರ ಕುಟುಂಬಸ್ಥರು ತಿಳಿಸಿದ್ದಾರೆ.