ವಿಟ್ಲ ಸ್ವರ ಸಿಂಚನ ಕಲಾ ತಂಡದದಿಂದ ನಾದೋಪಾಸನ  ಹಾಗೂ ತ್ಯಾಗರಾಜರ ಆರಾಧನೆ…..!

 ಪೆರ್ನಾಜೆ: ಶ್ರೀ ವಿಟ್ಲ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಾದೋಪಾಸನ ಹಾಗೂ ತ್ಯಾಗರಾಜರ ಆರಾಧನೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಸ್ವರ ಸಿಂಚನ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಫೆ.23ರಂದು ಬೆಳಿಗ್ಗೆಯಿಂದ ದಿನಪೂರ್ತಿ ನಡೆಯಿತು.

ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕರಾದ ಕೇಶವ ಆರ್ ವಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.  ಮುಖ್ಯ ಶಿಕ್ಷಕಿ ಸವಿತಾ ಕೋಡಂದೂರ್ ಮಾರ್ಗದರ್ಶನದಲ್ಲಿ ನಡೆಯಿತು.  ಪಕ್ಕ ವಾದ್ಯದಲ್ಲಿ ಮೃದಂಗ ವಾದಕರಾಗಿ ಕ್ಷಿತಿಶ ರಾಮ ಕೆ ಎಸ್, ವಯಲಿನ್ ನಲ್ಲಿ ಶ್ರೀ ಪ್ರಿಯಾ ಪರಕ್ಕಜೆ ಸಹಕರಿಸಿದರು. ರಮ್ಯಾ ಜೆಡ್ಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವರ ಸಿಂಚನ ಸಂಗೀತ ಶಾಲ ವಿದ್ಯಾರ್ಥಿಗಳು ಹಾಗೂ ಪೋಷಕರು  ಭಾಗವಹಿಸಿದ್ದರು.

ಸುಮಾರು 40 ವಿದ್ಯಾರ್ಥಿಗಳಿಂದ ಏಕವ್ಯಕ್ತಿ ಶಾಸ್ತ್ರೀಯ ಸಂಗೀತ ಪ್ರದರ್ಶನ ನಡೆಯಿತು ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಸ್ವರ ಮಧುರ ಗಾಯನ ಮೇಳ ರಂಜಿಸಿತು ಸಂಗೀತದ ಸುದೆಯ ತುoಬಿ ಮಾಧುರ್ಯ ಮನದಲ್ಲಿ ತುಂಬಿದೆ.

































 
 

ಭಾಗ್ಯಶ್ರೀ, ಆದರ್ಶನಿ , ಭುವಿ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top