ಬ್ರಹ್ಮಾವರ ಎಸ್‍.ಎಲ್‍.ಆರ್.ಎಮ್‍. ಘಟಕಕ್ಕೆ ಬೆಂಕಿ | ಸಂಪೂರ್ಣ ಭಸ್ಮ

ಬ್ರಹ್ಮಾವರ: ಬ್ರಹ್ಮಾವರ ಮಾರ್ಕೆಟ್ ಬಳಿಯಲ್ಲಿರುವ ಎಸ್.ಎಲ್.ಆರ್.ಎಮ್ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.

ಶುಕ್ರವಾರ ರಾತ್ರಿ  ಸುಮಾರು 1 ಗಂಟೆ ಹೊತ್ತಿಗೆ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ದಳದ ಪ್ರಯತ್ನದ ನಡುವೆಯೂ ಘಟಕ ಸಂಪೂರ್ಣ ಹೊತ್ತಿಕೊಂಡಿದೆ. ಘಟಕದ ಒಳಗೆ ನಿಲ್ಲಿಸಿದ ಮೂರು ಎಎಸ್ ಗಾಡಿಗಳು, ಒಂದು ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬೇಲಿಂಗ್ ಮೆಶಿನ್, ಒಂದು ಬರ್ನಿಂಗ್ ಮೆಶಿನ್ , 6 ಸಿಸಿ ಕೆಮರಾಗಳು, ಡಿವಿಆರ್, ಘಟಕದ ಆಫೀಸು, ಫೈಲ್ ಗಳು, ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸಮೀಪದ ಗುಜರಿ ಅಂಗಡಿಗೂ ಬೆಂಕಿ ತಗುಲಿದೆ.

ಉಡುಪಿ, ಕುಂದಾಪುರ, ಮಲ್ಪೆ ಮೂರು ಕಡೆಗಳ ಅಗ್ನಿಶಾಮಕ ವಾಹನಗಳು, ಸಿಬ್ಬಂದಿಗಳು ಬೆಂಕಿನಂದಿಸಲು ಹರಸಾಹಸ ಪಟ್ಟರು. ಬೆಂಕಿ ಹೇಗೆ ತಗುಲಿದೆ ಎಂಬುದನ್ನು ಪತ್ತೆ ಹಚ್ಚಲು ಡಿವಿಆರ್ ಪರಿಶೀಲಿಸಬೇಕಾಗಿದೆ.  ಬೆಂಕಿ ತಗುಲಿದ ಬಗ್ಗೆ ಎಳನೀರು ಮಾರಾಟಗಾರರು ಅಂಗಡಿಗಳಿಗೆ ಬೊಂಡ ಇಳಿಸಲು ಬಂದಾಗ ಬೆಂಕಿ ತಗುಲಿದ್ದನ್ನು ಗಮನಿಸಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ಅಗ್ನಿಶಾಮಕ ಠಾಣೆಗಳಿಗೆ ಸಂಪರ್ಕಿಸಿದ್ದರು. ಮಾಹಿತಿ ಸಿಕ್ಕಿದ ತಕ್ಷಣ ಅಗ್ನಿಶಾಮಕ ಘಟಗಳು ಆಗಮಿಸಿದ್ದರಿಂದ ಗುಜರಿ ಅಂಗಡಿಯ ಸಮೀಪದ ಅಂಗಡಿಗಳಿಗೆ ಬೆಂಕಿ ತಗಲುವುದು ತಪ್ಪಿದೆ. ಉಪ್ಪಿನಕೋಟೆಯ ಜೆಎಂಜೆ ಟ್ಯಾಂಕರ್ ನವರು ಅಗ್ನಿಶಾಮಕ ವಾಹನಗಳಿಗೆ ಸುಮಾರು 15 ಟ್ಯಾಂಕರ್ ನೀರು

































 
 

 ಜಿಲ್ಲಾ ಅಗ್ನಿಶಾಮಕ ಆಧಿಕಾರಿ ವಿನಾಯಕ ಕಲ್ಗುಟಕರ್, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್, ಮಲ್ಪೆ ಅಗ್ನಿಶಾಮಕ ಠಾಣಾಧಿಕಾರಿ ಮಹಮ್ಮದ್ ಶಫಿ ಮೂರು ಠಾಣೆಗಳ  ಪ್ರಮುಖ ಅಗ್ನಿಶಾಮಕರು ಹಾಗೂ ಸಿಬ್ಬಂದಿಗಳು ಬೆಂಕಿನಂದಿಸಲು ಹರ ಸಾಹಸ ಪಟ್ಟರು. ಬ್ರಹ್ಮಾವರ ಪೋಲೀಸರು ಎಲ್ಲಾ ಅಂಗಡಿ ಮಾಲಕರಿಗೆ ರಾತ್ರಿಯೇ ಮಾಹಿತಿ ನೀಡಿದ್ದರಿಂದ ರಾತ್ರಿಯೂ ಸಾಕಷ್ಟು ಜನರು ಸೇರಿದ್ದರು. ಡಿವಿಆರ್ ಸುಟ್ಟು ಹೋಗದೇ ಇರುವುದರಿಂದ ಪೊಲೀಸರು ಕೊಂಡು ಹೋಗಿ ಪರಿಶೀಲಿಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top