ಪುತ್ತೂರು: ಮಹಾವೀರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರ ತಾಯಿ ಸುನಂದಾ ಪುತ್ತೂರಾಯ (82 ವ.) ಅವರು ಮುಂಬಯಿಯಲ್ಲಿರುವ ಹಿರಿಯ ಪುತ್ರನ ಮನೆಯಲ್ಲಿ ಫೆ.25ರಂದು ಸಂಜೆ ನಿಧನರಾದರು.
ಸುನಂದಾರವರು ಕಿರಿಯ ಪುತ್ರ ಡಾ.ಸುರೇಶ್ ಪುತ್ತೂರಾಯ ರವರ ಮನೆಯಲ್ಲಿ ವಾಸವಿದ್ದು, ಕೆಲ ತಿಂಗಳ ಹಿಂದೆ ಮುಂಬಯಿಯಲ್ಲಿ ಇಂಜಿನಿಯರ್ ಆಗಿರುವ ಹಿರಿಯ ಪುತ್ರ ಗೋಪಾಲಕೃಷ್ಣರವರ ಮನೆಗೆ ತೆರಳಿದ್ದರು. ಮೃತರು ಪುತ್ರರಾದ ಗೋಪಾಲಕೃಷ್ಣಪುತ್ತೂರಾಯ. ಡಾ.ಸುರೇಶ್ ಪುತ್ತೂರಾಯ, ಪುತ್ರಿಯರಾದ ಶಶಿಕಲಾ ಸಾಮಗ ಉಡುಪಿ, ಧರ್ಮಸ್ಥಳ ಎಸ್.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ, ಸೊಸೆಯಂದಿರಾದ ಡಾ.ಸ್ವಪ್ನ, ಡಾ.ಆಶಾ ಪುತ್ತೂರಾಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮುಂಬಯಿಯಲ್ಲಿರುವ ಹಿರಿಯ ಪುತ್ರನ ಮನೆಯಲ್ಲಿ ಮೃತದೇಹದ ಅಂತಿಮಕ್ರಿಯೆಗಳು ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.