ಬಂಟ್ವಾಳ ತಾಲೂಕು, ಕೆದಿಲ ಗ್ರಾಮದ ಕರಿಮಜಲು ಪ್ರೇಮ W/O ರಾಮಮೂಲ್ಯ ಮತ್ತು ಕಂಪ ಲೋಕಯ ಗೌಡ ಇವರು ಅಸೌಖ್ಯಂದಿದ್ದು, ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಫೆ.24 ಸೋಮವಾರದಂದು ಕೊಮೋಡೋ ವೀಲ್ ಚಯರನ್ನು ನೀಡಲಾಯಿತು.
ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಮತ್ತು ಪೆರ್ನೆ ವಲಯ ಮೇಲ್ವಿಚಾರಕಿ ಶಾರದಾ ಕೊಮೋಡೋ ವೀಲ್ ಚಯರನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ ಶಾರದಾ ಮತ್ತು ಕೆದಿಲ “B” ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ, ವೆಂಕಪ್ಪ , ಶೀನಪ್ಪ, ಗಿರೀಶ ಉಪಸ್ಥಿತರಿದ್ದರು.