ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ದಿನದ ಪ್ರಯುಕ್ತ ಫೆ. 24ರಂದು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದಿಂದ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ ಜರಗಿತು.
ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ (ಕುಮುದಾಕ್ಷಿ) ಭಾಸ್ಕರ ಬಾರ್ಯ (ಹನುಮಂತ) ಶ್ರೀಧರ ಎಸ್. ಪಿ ಸುರತ್ಕಲ್ (ಕರ್ಣ), ಜಿನೇಂದ್ರ ಜೈನ್ ಬಳ್ಳಮಂಜ(ಗಾರ್ಗ್ಯ ಮುನಿ ಮತ್ತು ಕುಂಜರ), ಗೀತಾ(ಚಂದ್ರಸೇನ1), ಸತೀಶ್ ಶಿರ್ಲಾಲು(ದ್ರೋಣ), ಗುಡ್ಡಪ್ಪ ಬಲ್ಯ(ಅರ್ಜುನ), ಜಯರಾಮ ಬಲ್ಯ(ಭೀಮ), ರವೀಂದ್ರ ದರ್ಬೆ(ಕೌರವ), ಶ್ರುತಿ ವಿಸ್ಮಿತ್ (ಭೀಷನಿ), ಪೂರ್ಣಿಮಾ ರಾವ್ ಬೆಳ್ತಂಗಡಿ (ಧರ್ಮರಾಯ ಮತ್ತು ವಿಪ್ರರು), ಪ್ರದೀಪ ಚಾರ(ಚಂದ್ರಸೇನ 2 ಮತ್ತು ನಾರದ), ದಿವಾಕರ ಆಚಾರ್ಯ ಗೇರುಕಟ್ಟೆ (ವಿಜಯಶೀಲೆ ಮತ್ತು ಶ್ರೀಕೃಷ್ಣ ) ಭಾಗವಹಿಸಿದ್ದರು.
ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ ರಾವ್. ಬಿ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ನಿತೀಶ್ ಕುಮಾರ್ ವೈ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ, ಗುರುಮೂರ್ತಿ ಅಮ್ಮಣ್ಣಾಯ,ಕಾರ್ತಿಕ್ ಬಾರ್ಯ ಭಾಗವಹಿಸಿದ್ದರು.
ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 66 ನೇಯ ತಾಳಮದ್ದಳೆಯಾಗಿದ್ದು ಶ್ರೀದೇವಳದ ವತಿಯಿಂದ ಪ್ರಾಯೋಜಿಸಲಾಗಿತ್ತು. ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
20ಕ್ಕಿಂತಲೂ ಹೆಚ್ಚು ಕಲಾವಿದರು ಭಾಗವಹಿಸಿ ನಾಲ್ಕುವರೆ ಗಂಟೆಗಿಂತಲೂ ಹೆಚ್ಚಿನ ಅವಧಿಯಲ್ಲಿ ಜರಗಿದ ತಾಳಮದ್ದಳೆಯು ಕಲಾವಿದರು ಮತ್ತು ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಯಿತು. 1933ರಲ್ಲಿ ಚರ್ವಕಾಡು ಶಂಭು ಜೋಯಿಸರು ರಚಿಸಿದ ಈ ಪ್ರಸಂಗ ಯಕ್ಷಗಾನ ರಂಗದಲ್ಲಿ ಪ್ರದರ್ಶಿಸಲ್ಪಡುವ ಎಲ್ಲ ರೀತಿಯ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಹೊಂದಿದೆ.
ದೇವಾಲಯದ ಮ್ಯಾನೇಜರ್ ವೆಂಕಟೇಶ್ ಭಟ್, ಗಂಗಾಧರ ಟೈಲರ್, ಕಚೇರಿ ಸಿಬ್ಬಂದಿ ಪದ್ಮನಾಭ ಕುಲಾಲ್, ದಿವಾಕರ ಗೌಡ ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಪತಿ ಭಟ್ ವಂದಿಸಿದರು.