ಕಾರು ಡಿಕ್ಕಿ ಬಾಲಕ ಸಾವು

ಬೆಳ್ತಂಗಡಿ: ಕಾರು ಡಿಕ್ಕಿ ಹೊಡೆದು ಬಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ಅಂಡಿಂಜೆಯಲ್ಲಿ ನಡೆದಿದೆ.

ಅಂಡಿಂಜೆ ಗ್ರಾಮದ ನಿವಾಸಿ ದಿನೇಶ್ ಶರ್ಮ‌ ಎಂಬವರ ಪುತ್ರ ಇಮಾಂಶು ಶರ್ಮ(5) ಮೃತಪಟ್ಟ ಬಾಲಕ.

ಸೋಮವಾರ ಸಂಜೆ ಅಂಡಿಂಜೆಯಲ್ಲಿ ವೇಣೂರು-ನಾರಾವಿ ರಸ್ತೆಯಲ್ಲಿ ಬಂದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಬಾಲಕನ್ನು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಬಾಲಕ ಮೃತಪಟ್ಟಿದ್ದ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top