ಸುಳ್ಯ: ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ಎಂ.ಆರ್.ಪಿ.ಎಲ್.ವತಿಯಿಂದ 40ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ವಿಸ್ತ್ರತ ಕಟ್ಟಡ ದ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.

ನೂತನ ವಿಸ್ತ್ರತ ಕಟ್ಟಡವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನೆರವೇರಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ರಾದ ಡಾ.ಕೆ.ವಿ.ಚಿದಾನಂದ ಎಂ.ಆರ್.ಪಿ.ಎಲ್ ಜನರಲ್ ಮನೇಜರ್ ಸತೀಶ್ ಅಲೆಟ್ಟಿ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ದೇವಿಡ್ ದೀದಾ ಗ್ರಾಸಾ ಉಪಸ್ಥಿತರಿದ್ದರು.

ದ.ಕ.ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ವಂಗಾಯ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ರೇವತಿ ನಂದನ್, ಕೋಶಾಧಿಕಾರಿ ಮಾಧವ ಗೌಡ ಕಾಮಧೇನು ಹಾಗೂ ಪದಾಧಿಕಾರಿಗಳು, ಸಂಸ್ಥೆಯ ಮುಖ್ಯಸ್ಥರಾದ ದಯಾಮಣಿ ಕೆ.ಮತ್ತು ಭಾರತಿ ಪಿ. ಮೊದಲಾದವರು ಉಪಸ್ಥಿತರಿದ್ದರು.