ಮಂಗಳೂರು : ಮಂಗಳೂರಿನ ಜೈಲಿನೊಳಗೆ ಮಾದಕ ವಸ್ತು ಪೂರೈಕೆಯಾಗೋ ದೃಶ್ಯ ಸೆರೆಯಾದಿದಲ್ಲದೆ, ಮಾಜಿ ಮೇಯರ್ ಕಣ್ಣೆದುರಲ್ಲೇ ಜೈಲಿಗೆ ನಿಷೇಧಿತ ವಸ್ತು ರವಾಣೆಯಾಗಿದೆ.
ದ.ಕ. ಜಿಲ್ಲಾ ಕಾರಾಗೃಹಕ್ಕೆ ಯುವಕರು ಬೈಕ್ ನಲ್ಲಿ ಬಂದು ಗಾಂಜಾ ಎಸೆಯುತ್ತಿರುವ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಂಜಾ ಎಸೆಯುವ ದೃಶ್ಯ ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂತಹದ್ದೆ ಘಟನೆಗಳು ಹಿಂದಿನ ದಿನಗಳಿಂದ ಸಾಕಷ್ಟು ನಡೆಯುತ್ತಿತ್ತು ಎಂಬ ವಿಷಯ ತಿಳಿಸು ಬಂದಿದೆ.
ಗಾಂಜಾ ಎಸೆದು ಓಡಿದ ಯುವಕರಿಗೆ ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಭದ್ರತೆ ಹೆಚ್ಚಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ.