ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ರೋಬೋಟಿಕ್ ಆನೆಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ. ಭಾನುವಾರ ಶ್ರೀಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ರೋಬೋಟಿಕ್ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರೆಲ್ಲರೂ ಸೇರಿ ಆನೆಯ ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ. ರೋಬೋಟಿಕ್ ಆನೆಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದರು.
ಮುಂಬೈನ ಕುಪಾ ಆ್ಯಂಡ್ ಪೀಠಾ ಇಂಡಿಯಾ ಎಂಬ ಸಂಸ್ಥೆ ವತಿಯಿಂದ ನಟ ಸುನೀಲ್ ಶೆಟ್ಟಿ ಅವರು ರೋಬೋಟಿಕ್ ಆನೆಯನ್ನು ನೀಡಿದ್ದಾರೆ. ಈ ಸಂಸ್ಥೆ ವತಿಯಿಂದ ಈಗಾಗಲೇ ರಾಜ್ಯದ ಸುತ್ತೂರು, ಯಡಿಯೂರು ಸೇರಿದಂತೆ ಮೂರು ಮಠಗಳಿಗೆ ಆನೆ ನೀಡಲಾಗಿದೆ.
ಒಂದು ರೋಬೋಟಿಕ್ ಆನೆಗೆ 17 ಲಕ್ಷ ರೂಪಾಯಿ ತಗಲುತ್ತದೆ. ನಿಜವಾದ ಆನೆಯ ತದ್ರೂಪಿಯಂತಿದೆ ರೋಬೋಟಿಕ್ ಆನೆ. ರೋಬೋಟಿಕ್ ಆನೆಯನ್ನು ಟ್ರ್ಯಾಲಿ ಮೇಲೆ ನಿಲ್ಲಿಸಲಾಗಿರುತ್ತದೆ. ಟ್ರ್ಯಾಲಿ ಮೂಲಕ ಆನೆ ಚಲಿಸುತ್ತದೆ. ರೋಬೋಟಿಕ್ ಆನೆಯನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಸಲಾಗುತ್ತದೆ. ಇದರಿಂದ ಆನೆ ನಿರಂತರವಾಗಿ ಕಣ್ಣು ಪಿಳಿಕಿಸುವುದು, ಕಿವಿ ಅಲ್ಲಾಡಿಸುವುದು, ಬಾಲ ಬೀಸುತ್ತದೆ.
ದಾವಣಗೆರೆಯ ಮಠಕ್ಕೆ ನಟ ಸುನಿಲ್ ಶೆಟ್ಟಿಯಿಂದ ರೋಬೋಟಿಕ್ ಆನೆ ಕೊಡುಗೆ
