ಬಲ್ಯ ಗ್ರಾಮದ ಶ್ರೀ ಕ್ಷೇತ್ರ ಬೀರುಕ್ಕು ಶ್ರೀ ನಾಗದೇವರು, ರಾಜನ್ ದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಉತ್ಸವದ ಪ್ರಯುಕ್ತ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ರಾಮನಗರ ಮತ್ತು ಅತಿಥಿ ಕಲಾವಿದರಿಂದ ನಳಚರಿತ್ರೆ ತಾಳಮದ್ದಳೆ ಜರಗಿತು.
ಭಾಗವತರಾಗಿ ಡಿ. ಕುಸುಮಾಕರ ಹಳೆ ನೇರೇಂಕಿ ಹಿಮ್ಮೇಳದಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರು ಪಂಜ,ಹರಿ ದೇವಾಡಿಗ ನಗ್ರಿ, ಅರ್ಥಧಾರಿಗಳಾಗಿ ಗುಡ್ಡಪ್ಪ ಬಲ್ಯ(ಋತುಪರ್ಣ) ಅಮ್ಮಿಗೌಡ ನಾಲ್ಗುತ್ತು(ಬಾಹುಕ )ದಿವಾಕರ ಆಚಾರ್ಯ ಗೇರುಕಟ್ಟೆ(ದಮಯಂತಿ )ಜಯರಾಮ ನಾಲ್ಗುತ್ತು(ಭೀಮಕ ಮತ್ತು ಶನಿ )ಗಂಗಾಧರ ಶೆಟ್ಟಿ ಹೊಸಮನೆ(ನಳ )ತಿಮ್ಮಪ್ಪ ಪುಳಿತ್ತಡಿ(ಸುದೇವ) ಕಿರಣ್ ಗೌಡ ಪುತ್ತಿಲ (ಚೈದ್ಯರಾಣಿ) ಭಾಗವಹಿಸಿದ್ದರು.
ಕಾರ್ಯಕ್ರಮ ಪ್ರಾಯೋಜಿಸಿದ್ದ ಅಮ್ಮಿ ಗೌಡ ನಾಲ್ಗುತ್ತು ಕಲಾವಿದರನ್ನು ಸ್ವಾಗತಿಸಿ ಗೌರವಿಸಿದರು. ಜಯರಾಮಗೌಡ ನಾಲ್ಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.