ವಿಟ್ಲ : ಖಾಸಗಿ ಬಸ್‌ನಲ್ಲಿ ಹಾಕಿದ ಬೆಲೆಬಾಳುವ ಪಾರ್ಸೆಲ್‌ವೊಂದನ್ನು ಅಪರಿಚಿತರು ಬಸ್ ಡ್ರೈವರ್ ಬಳಿ ಕೇಳಿ ಕೊಂಡೊಯ್ದ ಘಟನೆ ವಿಟ್ಲದಲ್ಲಿ ನಡೆದಿದೆ.
ಫೆ 13 ರಂದು ಬಿಸಿ ರೋಡಿನಿಂದ 12:45 ಕ್ಕೆ ಹೊರಡುವ ಫಾಲ್ಗುಣಿ (KA 20 AC 0719) ಬಸ್ಸಲ್ಲಿ ಬಿ ಸಿ ರೋಡ್ ಏಜೆಂಟ್ ಆದ ಭಾಸ್ಕರ್ ನ ಮುಖಾಂತರ ಸಂತೋಷ್ ಕೆಲಿಂಜ ಎಂಬವರ 15000 ಬೆಲೆಬಾಳುವ ಒಂದು ಪಾರ್ಸೆಲ್ ಕೆಲಿಂಜಕ್ಕೆ ಕಳುಹಿಸಲಾಗಿತ್ತು 1.15 ಕ್ಕೆ ಮುಟ್ಟಬೇಕಾದ ಬಸ್ 1.05 ಕ್ಕೆ ಕೆಲಿಂಜ ಮಾರ್ಗದಲ್ಲಿ ಪಾಸಾಗಿರುತ್ತದೆ. ಈ ವೇಳೆ ವಿಟ್ಲಕ್ಕೆ ಬಂದು ಬಸ್ ಡ್ರೈವರ್ ಬಳಿ ಕೇಳಿದಾಗ ಯಾರೋ ಇಬ್ಬರು ಬೈಕ್‌ನಲ್ಲಿ ಬಂದು ಬಸ್ ಏಜೆಂಟ್ ಕೊಟ್ಟ ಪಾರ್ಸೆಲ್ ಕೊಡಿ ಎಂದು ಕೇಳಿದಾಗ ಅವರಿಗೆ ಕೊಟ್ಟಿರುತ್ತೇನೆ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ.
ಪಾರ್ಸೆಲ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದ್ದರೂ ಬಸ್ ಡ್ರೈವರ್ ಏನೂ ವಿಚಾರಿಸದೆ ಬೆಲೆಬಾಳುವ ಪಾರ್ಸೆಲ್‌ನ್ನು ಅಪರಿಚಿತರ ಕೈಗೆ ನೀಡಿರುತ್ತಾರೆ. ಇದಕ್ಕೆ ಹೊಣೆ ಯಾರು? ಇನ್ನು ಯಾವ ಧೈರ್ಯದಲ್ಲಿ ಬಸ್‌ನಲ್ಲಿ ಪಾರ್ಸೆಲ್ ಕಳುಹಿಸಬಹುದೆಂದು ಸಾರ್ವಜನಿಕರಲ್ಲಿ ಆಂತಕದ ಪ್ರಶ್ನೆಯಾಗಿದೆ ಎಂದು ಪಾರ್ಸೆಲ್ ಕಳೆದುಕೊಂಡ ಸಂತೋಷ್ ಕೆಲಿಂಜ ರವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.