ಪುತ್ತೂರು: ಕಾರ್ಪೋರೇಷನ್ ಪ್ರೈ.ಲಿ. ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ 5ನೇ ವರ್ಷದ ‘ದ್ವಾರಕೋತ್ಸವ-2025’ ಭಾನುವಾರ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಿತು.

ದ್ವಾರಕಾ ಕಾರ್ಪೋರೇಷನ್ ಪ್ರೈ.ಲಿ. ಕಂಪೆನಿಯ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನದ ವತಿಯಿಂದ 5ನೇ ವರ್ಷದ ‘ದ್ವಾರಕೋತ್ಸವ ಫೆ.16 ರಂದು ಹಿರಿಯ ಆರ್ಥಿಕ ತಜ್ಞ ವಿಶ್ವೇಶ್ವರ ಭಟ್ ಬಂಗಾರಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರ್ಥಶಾಸ್ತ್ರದ ಪ್ರಕಾರ ಶ್ರೀಮಂತರು ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತೆ. ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿ ಉದ್ಯೋಗ ಸೃಷ್ಟಿಸಿ ಸಮಾಜಕ್ಕೆ ಕೊಡುಗೆ ನೀಡುವುದೂ ದೊಡ್ಡ ಸಮಾಜ ಸೇವೆಯಾಗಿದ್ದು ಯಾರೂ ಮಾಡದೇ ಈ ಸೇವೆ ಗೋಪಾಲಕೃಷ್ಣ ಭಟ್ ಮಾಡುವ ಜೊತೆಗೆ ಇನ್ನಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಶ್ರೀಮಂತರಾಗಿ ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದೂ ದೊಡ್ಡ ಸೇವೆ. ದ್ವಾರಕಾ ಸಂಸ್ಥೆಯ ಮುಖಾಂತರ ದೇಶ, ಸಮಾಜಕ್ಕೆ ಸಂಬಂಧಿಸಿದ ಹತ್ತಾರು ಕ್ಷೇತ್ರದಲ್ಲಿ ಸೇವೆಯ ಮೂಲಕ ಗೋಪಾಲಕೃಷ್ಣ ಭಟ್ ಶ್ರೀಮಂತಿಗೆಯನ್ನು ಸಮಾಜಕ್ಕೆ ಸದ್ವನಿಯೋಗ ಮಾಡುತ್ತಿದ್ದಾರೆ. ನಿಮ್ಮ ಸಾಧನೆಯು ಪುತ್ತೂರಿನ ಆಧುನಿಕ ಚರಿತ್ರೆಯಲ್ಲಿ ದ್ವಾರಕಾದ ಹೆಸರು ಅಜರಾಮರವಾಗಿರಲಿ ಎಂದರು.

ಮುಖ್ಯ ಅತಿಥಿಯಾಗಿ ಮಕ್ಕಳ ತಜ್ಞೆ, ಆಪ್ತ ಸಲಹೆಗಾರರಾಗಿರುವ ಡಾ.ಸುಲೇಖಾ ವರದರಾಜ್ ಮಾತನಾಡಿ, ದ್ವಾರಕಾ ಸಂಸ್ಥೆಯ ಮುಖಾಂತರ ಹಲವು ಮನೆ, ಮನಗಳನ್ನು ಒಂದು ಗೂಡಿಸಿರುವ ಕಾರ್ಯವು ಅತ್ಯಂತ ಗೌರವ ತಂದಿದೆ. ಬೆಳವಣಿಗೆ ಮತ್ತು ಅಭಿವೃದ್ಧಿಯ ಜೊತೆಗೆ ಸಮಾಜ ಸೇವೆಯ ಮೂಲಕ ಜೀವನದ ವಿಕಸವೂ ಮುಖ್ಯವಾಗಿದ್ದು ಅದನ್ನು ದ್ವಾರಕ ಸಂಸ್ಥೆಯು ಮಾಡಿ ತೋರಿಸಿದೆ. ಜೀವನದ ಅರ್ಥ ಉದ್ದೇಶ ಅರಿಚಯ ಮೂಡಿಸುವ ಜೊತೆಗೆ ಮಕ್ಕಳ ಪರಿಪೂರ್ಣ ವಿಕಸನಕ್ಕೆ ಪೂರಕವಾದ ಕಾರ್ಯವು ದ್ವಾರಕಾ ಪ್ರತಿಷ್ಠಾನದಿಂದ ನಡೆಯುತ್ತಿದೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಸಾಹಿತಿಗಳು, ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಶ್ರೀಧರ ಎಚ್.ಜಿ ಮಾತನಾಡಿ, ಸಾಮಾಜಿಕ, ಸಾಹಿತ್ಯ ವಾಗಿ ತೊಡಗಿಸಿಕೊಂಡಿರುವ ದ್ವಾರಕ ಪ್ರತಿಷ್ಠಾನದ ಮೂಲಕ ಪುತ್ತೂರಿನ ಸಾಹಿತಿಗಳ ಕೃತಿಗಳು ಒಂದೇ ಕಡೆ ದೊರೆಯುವ ಕಾರ್ಯವಾಗಲಿ ಎಂದರು.
ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಗ.ನಾ ಭಟ್ ರಚಿಸಿದ ಸತೀ ಸಾವಿತ್ರಿ ಪುಸ್ತಕದ ಪರಿಚಯ ಮಾಡಿದರು.
ಕೃಷ್ಣಮೂರ್ತಿ ಕೆಮ್ಮಾರರವರ ಪುರಾಣ ರಸಪ್ರಶ್ನಾವಲೀಯನ್ನು ಯುವ ಬರಹಗಾರ ನವೀನಕೃಷ್ಣ ಎಸ್. ಪರಿಚಯ ಮಾಡಿದರು.
ಮಿತ್ತೂರು ಬ್ರಹ್ಮಶ್ರೀ ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ., ಕೃತಿಕಾರ ಕೃಷ್ಣ ಮೂರ್ತಿ ಕೆಮ್ಮಾರ, ಸತೀ ಸಾವಿತ್ರಿ ಕೃತಿಕಾರ ಗ.ನಾ ಭಟ್ಟ ಮೈಸೂರು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ದ್ವಾರಕಾ ಪ್ರರಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಮಾತನಾಡಿ, ದ್ವಾರಕ ಸಂಸ್ಥೆಯು ಮೊಳಕೆ ಒಡೆದ ಸಂದರ್ಭದಲ್ಲಿ ಕಾರ್ಯರೂಪಕ್ಕೆ ಬಂದ ಕೆಲಸ ಕಾರ್ಯಗಳು ಈಗ ಬೆಳೆದ ಹೆಮ್ಮರದ ಮರದ ರೂಪದಲ್ಲಿ ಎಲ್ಲರಿಗೂ ನೆರಳು, ಆಶ್ರಯ ನೀಡುತ್ತಿದೆ. ವಿದ್ಯಾಭ್ಯಾಸ, ಕಲೆ, ಉದ್ಯೋಗ ಸೇರಿದಂತೆ ಹಲವು ರೀತಿಯಲ್ಲಿ ಸಮಾಜದಲ್ಲಿ ತನ್ನದೇ ಕೊಡುಗೆ ನೀಡುತ್ತಿದೆ. ಸಂಸ್ಥೆಯು ಬೆಳೆದು ಇನ್ನಷ್ಟು ನಾನಾ ರೀತಿಯಲ್ಲಿ ಸಮಾಜ ಸೇವೆಯು ಈ ಸಂಸ್ಥೆಯ ಮೂಲಕ ನಡೆಯಲಿ ಎಂದರು.
ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ 2004-05 ರಲ್ಲಿ ಪ್ರಾರಂಭವಾದ ನಮ್ಮ ಸಂಸ್ಥೆಯು ಪುತ್ತೂರು ಕೇಂದ್ರವಾಗಿಸಿಕೊಂಡು ದ.ಕ, ಕಾಸರಗೋಡು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಂತ ಹಂತವಾಗಿ ಬೆಳೆಯುವ ಜೊತೆಗೆ ಸಾಮಾಜಿಕ ಕೆಲಸವನ್ನು ಜೀವನದ ಅವಿಭಾಜ್ಯ ಅಂಗವಾಗಿ ನಡೆಸಲಾಗುತ್ತಿದೆ. 2019 ರಲ್ಲಿ ಪ್ರತಿಷ್ಠಾನ ನೋಂದಾಯಿಸಿಕೊಂಡು ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಚಟುವಟಿಕೆ ಹಾಗೂ 10ಕ್ಕೂ ಅಧಿಕ ಪುಸ್ತಕಗಳ ಬಿಡುಗಡೆ ಮಾಡಿದೆ. ಜೊತೆಗೆ ಕಲಾ ಕ್ಷೇತ್ರದಲ್ಲಿಯೂ ಕೊಡುಗೆ ನೀಡುತ್ತಿದ್ದು ದ್ವಾರಕ ಕಲಾ ಶಾಲೆಯೂ ಕಾರ್ಯನಿರ್ವಹಿಸುತ್ತಿದೆ ಎಂದರು.
ವಿದ್ವಾನ್ ಗ.ನಾ ಭಟ್ ರವರ ಸತೀ. ಸಾವಿತ್ರಿ, ಕೃಷ್ಣಮೂರ್ತಿ ಕೆಮ್ಮಾರವರ ಪುರಾಣ ರಸ ಪ್ರಶ್ನಾವಲೀ, ಮಿತ್ತೂರು ಪುರೋಹಿತ ಶ್ರೀನಿವಾಸ ಭಟ್ಟ ಪರಿಷ್ಕರಣೆ ಮತ್ತು ಪರಿವರ್ಧನೆ ಮಾಡಿದ ವೇದವಸಮಂತ ಮತ್ತು ವೇದ ಮಾಧವ ಎಂಬ ಕೃತಿಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತ್ತು.
ಸನ್ಮಾನ, ಪ್ರತಿಭಾ ಪುರಸ್ಕಾರ :
ಸಾವಯವ ಕೃಷಿ ಕ್ಷೇತ್ರದ ಸಾಧಕ ಸುಬ್ರಹ್ಮಣ್ಯ ಭಟ್ಟ ನೆಕ್ಕರೆಕಳೆಯ, ಭಾರತೀಯ ಸೇನೆ, ಕೃಷಿ ಹಾಗೂ ಸಮಾಜ ಸೇವೆಯಲ್ಲಿ ಡಾ.ಗೋಪಾಲಕೃಷ್ಣ ಕಾಂಚೋಡು, ಯಕ್ಷಗಾನ ಹಿಮ್ಮೇಳದಲ್ಲಿ ಪದ್ಯಾಣ ಶಂಕರನಾಯಣ ಭಟ್ಟ, ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಸ್ವಸ್ತಿಕ್ ಭಟ್ ಮುರ್ಗಜೆ, ಸಾಮಾಜಿಕ ಜಾಲತಾಣ ಹಾಗೂ ಆಹಾರೋದ್ಯಮದಲ್ಲಿ ಸುದರ್ಶನ ಭಟ್ಟ ಬೆದ್ರಡಿಯವರನ್ನು ಸನ್ಮಾನಿಸಲಾಯಿತು. ದ್ವಾರಕ ಕಲಾ ಶಾಲೆಯ ಮೂಲಕ ಕೀ.ಬೋರ್ಡ್, ಚೆಂಡೆ, ಮದ್ದಲೆ ತರಬೇತಿ ಪಡೆದ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದುರ್ಗಾ ಗಣೇಶ್ ಪ್ರಾರ್ಥಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಗಣರಾಜ್ಯ ಕುಂಬ್ಳೆ ಸ್ವಾಗತಿಸಿದರು. ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಶಾಲು ಹಾಕಿ ಹಾಗೂ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಅಮೃತ ಕೃಷ್ಣಾ ವಂದಿಸಿದರು. ನವೀನಕೃಷ್ಣಾ ಉಪ್ಪಿನಂಗಡಿ ಹಾಗೂ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬಂದಿಗಳು ಸಹಕರಿಸಿದರು.
ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿ:
ಸಭಾ ಕಾರ್ಯಕ್ರಮದ ಬಳಿಕ ನಡೆದ ಕೃಷಿ ಮತ್ತು ಆರ್ಥಿಕ ವಿಚಾರಗೋಷ್ಠಿಯು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಗೋಪಾಲಕೃಷ್ಣ ಕಾಂಚೋಡು ಕೃಷಿಯಲ್ಲಿ ಅಡಿಕೆಗೆ ಪರ್ಯಾಯ, ವಿಶ್ವೇಶ್ವರ ಭಟ್ ಬಂಗಾರಡ್ಕರವರು ರಿಯಲ್ ಎಸ್ಟೇಟ್ ಮತ್ತು ಆರ್ಥಿಕತೆ ಹಾಗೂ ಸುಬ್ರಹ್ಮಣ್ಯ ಪ್ರಸಾದ ಭಟ್ಟ ನೆಕ್ಕರಕಳೆಯರವರು ದೇಶೀ ಗೋವು ಮತ್ತು ಗನ್ಯೋತ್ಪನ್ನಗಳ ಕುರಿತು ವಿಷಯ ಮಂಡಿಸಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ:
ಅಪರಾಹ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬು ಕಾಟುಕುಕ್ಕೆ ಮತ್ತು ದ್ವಾರಕಾ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕೀ-ಬೋರ್ಡ್ ವಾದನ, ಗಣರಾಜ ಕುಂಬ್ಳೆ ನಿರ್ದೇಶನದಲ್ಲಿ ಚೂಡಾಮಣಿ ಯಕ್ಷಗಾನ ತಾಳಮದ್ದಳೆ, ಸಂಜೆ ಆಯಾಭಟ ಪ್ರಶಸ್ತಿ ಪುರಸ್ಕೃತ ಗಾನಭೂಷಣ ವಿದ್ವಾನ ವೆಂಕಟಕೃಷ್ಣ ಭಟ್ ಗುಂಡ್ಯಡ್ಕ ಮತ್ತು ಬಳಗದವರಿಂದ ‘ಭಾವ ಗಾನ ಲಹರಿ’ ಹಾಗೂ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ದೀಪಕ್ ಕುಮಾರ್ ಮತ್ತು ಶಿಷ್ಯರಿಂದ ಮಧುರಾಕೃತಿ-ಶ್ರೀಕೃಷ್ಣ ಲೀಲೆಗಳು ನೃತ್ಯರೂಪಕ ನಡೆಯಿತು.