ಬೆಳ್ತಂಗಡಿ : ಯಕ್ಷ ಭಾರತಿ ಬೆಳ್ತಂಗಡಿ ದಶಮಾನೋತ್ಸವ ಅಂಗವಾಗಿ ಭಗವದ್ಗೀತೆಯ ಶ್ಲೋಕಗಳ ಪಠಣದ ವಿಶೇಷ ಸಾಧಕಿ ಅದ್ವಿತಿ ರಾವ್ ಗೆ ಅಭಿನಂದನೆಯನ್ನು ಸಲ್ಲಿಸಲಾಯಿತು.
ಅದ್ವಿತಿ ರಾವ್ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಶ್ರೀಮತಿ ಅಖಿಲಾ ಮತ್ತು ಶ್ರೀ ಅಶ್ವಥ್ ದಂಪತಿ ಪುತ್ರಿಯಾಗಿದ್ದು, ಉಜಿರೆ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಇಲ್ಲಿಯ ಭಗವದ್ಗೀತೆ ಪಾಠ ಪಠಣ ತರಗತಿಯ ಆರಂಭದ ವಿದ್ಯಾರ್ಥಿನಿಯಾಗಿದ್ದು, ಭಗವದ್ಗೀತೆಯ 18 ಅಧ್ಯಾಯದ ಕಂಠಪಾಠ ಪಠಣವು ಯು ಪ್ಲಸ್ ಟಿವಿಯಲ್ಲಿ ಪ್ರತಿ ಸೋಮವಾರ ಪ್ರಸಾರವಾಗುತಿತ್ತು. ಶ್ರೀ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಭಗವದ್ಗೀತೆಯ ಎರಡು ಅಧ್ಯಾಯಗಳ ಕಂಠಪಠಣವನ್ನು ಮಾಡಿದ್ದಾgÉ. ಶೃಂಗೇರಿAiÀÄಲ್ಲಿ ಡಿ. 1, 2024 ರಂದು ಭಗವದ್ಗೀತೆಯ 18 ಅಧ್ಯಾಯದ 700 ಶ್ಲೋಕಗಳ ಕಂಠಪಾಠ ಪರೀಕ್ಷೆ ಗೀತಾ ಜ್ಞಾನ ಯಜ್ಞದಲ್ಲಿ ಪ್ರಥಮ ಶ್ರೇಣಿಯನ್ನು ಪಡೆದು ಶ್ರೀ ವಿಧುಶೇಖರ ಭಾರತೀ ಗುರುಗಳ ಆಶೀರ್ವಾದವನ್ನು ಪಡೆದಿರುತ್ತಾರೆ.
ಗೀತಾ ಪರಿವಾರದಿಂದ ನಡೆಸಲ್ಪಟ್ಟ ಭಗವದ್ಗೀತೆಯ ಕಂಠಪಾಠ ಪರೀಕ್ಷೆಗಳಾದ ಗೀತಾ ಗುಂಜನ್, ಗೀತಾ ಜಿಜ್ಞಾಸು, ಗೀತಾ ಪಥಿಕ, ಗೀತಾ ಪಾಠಕ್ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿ ಪಡೆದಿzÁÝgÉ. ಗೀತಾ ಪರಿವಾರದ 18 ಅಧ್ಯಾಯದ ಕಂಠಪಾಠ ಪರೀಕ್ಷೆ ಗೀತಾವ್ರತಿಯಲ್ಲಿ 600 ರಲ್ಲಿ 600 ಅಂಕಗಳನ್ನು ಗಳಿಸಿದ್ದಾರೆ.
ಶ್ರೀ ಸುಬ್ರಹ್ಮಣ್ಯಸ್ಥಾನಿಕ ಬ್ರಾಹ್ಮಣ ಸಭಾ (ರಿ.) ಬೆಳ್ತಂಗಡಿ ಮತ್ತು ಉಜಿರೆ ವಲಯದ ರಜತ ಸಂಭ್ರಮ, ಶಿವದುರ್ಗಾ ಟೈಗರ್ಸ್ ಚಂದ್ಕೂರು ಮತ್ತು ಅಖಿಲಾ ಭಾರತ ಸ್ಥಾನಿಕ ಬ್ರಾಹ್ಮಣ ಸಭಾ ಬೆಂಗಳೂರು, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯ ವಾರ್ಷಿಕೋತ್ಸವ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾ ಮಹೋತ್ಸವ, ಶ್ರೀ ಸುಬ್ರಹ್ಮಣ್ಯ ಸಭಾ ಮಂಗಳೂರಿನಲ್ಲಿ ಈಕೆಗೆ ಸನ್ಮಾನಗಳಾಗಿವೆ. ಕಂಚಿ ಕಾಮಕೋಟಿ ಕಾಂಚಿಪುರಂ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯರು ಶ್ರೀ ಕಾಮಾಕ್ಷಿ ದೇವಿಯ ಬೆಳ್ಳಿಯ ಪದಕವನ್ನು ನೀಡಿ ಆಶೀರ್ವದಿಸಿದ್ದಾರೆ. ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿಯ ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ. ಉಜಿರೆ ಶ್ರೀ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್ ಗಣಪತಿಯ ಬೆಳ್ಳಿಯ ನಾಣ್ಯ ನೀಡಿ ಗೌರವಿಸಿದ್ದಾರೆ. ಧರ್ಮಸ್ಥಳದ ಶ್ರೀಮತಿ ಸೋನಿಯಾ ವರ್ಮ ಮತ್ತು ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಜೈನ್, ಡಾ. ಪ್ರದೀಪ್ ನಾವೂರ್, ಉಜಿರೆ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಬೆಳ್ತಂಗಡಿ ಕ್ಷೇತ್ರ ಶಾಸಕ ಹರೀಶ್ ಪೂಂಜ, ಕೆ.ಪಿ. ವಾಸುದೇವ ರಾವ್ ಶಾರದಾ ವಿದ್ಯಾಲಯ ಮಂಗಳೂರು, ರಮೇಶ್ ಆಚಾರ್ಯ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಅರ್ಚಕರಾದ ಅನಂತರಾಮ ಮಯ್ಯ ವೈಯಕ್ತಿಕವಾಗಿ ಗೌರವಿಸಿದ್ದಾರೆ.
r. 15, 2024 ರಂದು ಶಾರದಾ ವಿದ್ಯಾಲಯ ಕೊಡಿಯಲುಬೈಲು ಮಂಗಳೂರು ಗೀತಾ ಜಯಂತ್ಯುತ್ಸವದಲ್ಲಿ ಭಗವದ್ಗೀತೆಯ 18 ಅಧ್ಯಾಯದ ಗೀತಾ ಜ್ಞಾನ ಯಜ್ಞದಲ್ಲಿ ಪ್ರಥಮ ಶ್ರೇಣಿಯನ್ನು ಪಡೆದುದಕ್ಕಾಗಿ ಸಂಸ್ಥೆಯ ವತಿಯಿಂದ “ದಿವ್ಯ ಜ್ಯೋತಿ” ಎಂಬ ಬಿರುದನ್ನು ನೀಡಿ ಸನ್ಮಾನಿಸಿದ್ದಾರೆ . ಇವgÀÄ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯವನ್ನು ಅಭ್ಯಸಿಸುತ್ತಿದ್ದಾgÉ. ಮಕ್ಕಳ ಧ್ವನಿ, ಪ್ರತಿಭಾ ಕಾರಂಜಿ, ಸೋoದ ಸ್ವರ್ಣವಲ್ಲಿ ಮಠ , ಧರ್ಮಸ್ಥಳ ಶಾಂತಿವನ ಟ್ರಸ್ಟ್ ನಿಂದ ನಡೆಸಲ್ಪಟ್ಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.
ಯಕ್ಷ ಭಾರತಿ ರಿ. ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯು ಮೂರು ವರ್ಷಗಳ ಹಿಂದೆ ನಡೆಸಿದ ಸಂಸ್ಕಾರ ಶಿಕ್ಷಣ ಶಿಬಿರದ ವಿದ್ಯಾರ್ಥಿನಿಯಾಗಿದ್ದು, ಅದ್ವಿತಿ ರಾವ್ ಇವರ ಬಹುಮುಖಿ ಸಾಧನೆಯನ್ನು ಗುರುತಿಸಿ ಯಕ್ಷ ಭಾರತಿ ಸಂಸ್ಥೆ ಉಜಿರೆ ಶ್ರೀರಾಮಕೃಷ್ಣ ಸಭಾಮಂಟಪದಲ್ಲಿ ಫೆ. 8. 2025ರಂದು ಜರಗಿದ ದಶಮಾನೋತ್ಸವ ಸಮಾರಂಭದಲ್ಲಿ ವಿಶೇಷವಾಗಿ ಗೌರವಿಸಿದರು.