ವಿಟ್ಲ: ಇಲ್ಲಿನ ಮೆಗಿನ ಪೇಟೆ ಶ್ರೀ ಚಂದ್ರನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವದ ಧಾರ್ಮಿಕ ಸಭೆ ಫೆ.13ರಂದು ನಡೆಯಿತು.
ವಿಟ್ಲ ಮೆಗಿನ ಪೇಟೆ ಶ್ರೀ ಚಂದ್ರನಾಥ ಸ್ವಾಮಿ ಪಂಚ ಕಲ್ಯಾಣ ಮಹೋತ್ಸವದ ಅಂಗವಾಗಿ ಕರ್ತವ್ಯ ನಿರ್ವಹಿಸಿದ ತಾಲೂಕಿನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಕರ್ತರು ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕರ್ತವ್ಯದ ಕುರಿತಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು ಮಾತನಾಡಿದ ಅವರು ಶೌರ್ಯ ವಿಪತ್ತು ತಂಡ ಸಮಾಜಕ್ಕೆ ಉಪಯುಕ್ತ ತಂಡ ಎಂದು ಹೇಳಿದರು.

ಬಳಿಕ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಹಕರು, ಯೋಜನಾಧಿಕಾರಿಗಳು, ಕೃಷಿ ಅಧಿಕಾರಿ, 9 ವಲಯದ ಮೇಲ್ವಿಚಾರಕರು, ತಾಂತ್ರಿಕ ಸಿಬ್ಬಂದಿಗಳು, ಕಚೇರಿ ಮ್ಯಾನೇಜರ್, ಯೋಜನಾ ಕಚೇರಿ ಸಿಬ್ಬಂದಿಗಳು ಹಾಗೂ ಶೌರ್ಯ ತಂಡದ ಸದಸ್ಯರು ಸೇರಿ ಪೂಜ್ಯರಿಗೆ ಗೌರವಾರ್ಪಣೆಯನ್ನು ಮಾಡಿದರು.