ರಾಷ್ಟ್ರಕ್ಕಾಗಿ ಜೀವನ ಮುಡಿಪಾಗಿರಿಸಿ : ಲತೇಶ್ ಬಾಕ್ರಬೈಲು | ಸ್ವಾಮಿ ವಿವೇಕಾನಂದ ವಿಷಯಾಧಾರಿತ “ವಿವೇಕ ಸ್ಮೃತಿ” ಕಾರ್ಯಕ್ರಮ

ಪುತ್ತೂರು: ರಾಷ್ಟ್ರ್ರ ಎಂದರೇನು, ರಾಷ್ಟ್ರದಲ್ಲಿ ನಾವೇನು ಮತ್ತು ನಮಗೆ ರಾಷ್ಟ್ರವೇನು ಈ ಮೂರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳದ ವಿನಃ ವಿವೇಕಾನಂದರ ಚಿಂತನೆಗಳನ್ನು ಅರ್ಥ ಮಾಡಿಕೊಳುವುದು ಕಷ್ಟ. ವಿದ್ಯಾರ್ಥಿಗಳು ವಿವೇಕಾನಂದರ ಚಿಂತನೆಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತುಉತ್ತಮ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ರಾಷ್ಟ್ರಕ್ಕಾಗಿಜೀವನವನ್ನು ಮುಡಿಪಾಗಿರಿಸಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ನ ಜಿಲ್ಲಾ ಸಹಕಾರ್ಯದರ್ಶಿ ಲತೀಶ್ ಬಾಕ್ರಬೈಲು ಹೇಳಿದರು.

ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ನಡೆದ ಸ್ವಾಮಿ ವಿವೇಕಾನಂದ ವಿಷಯಾಧಾರಿತ “ವಿವೇಕ ಸ್ಮೃತಿ” ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ. ವಿವೇಕ ಸ್ಮೃತಿ ಕಾರ್ಯಕ್ರಮದ ಉದ್ದೇಶ. ನಮ್ಮಆಚರಣೆ ನಮ್ಮ ಚಿಂತನೆಗಳನ್ನು ಮುಂದಿನ ಪೀಳಿಗೆಗಳಿಗೆ ತಿಳಿಸುವುದಾಗಿದೆ. ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳನ್ನು ಓದಿ ತಿಳಿಯುದಕ್ಕಿಂತ ಅವರ ಬಗ್ಗೆ ಅರಿತವರ ಮಾತುಗಳಲ್ಲಿ ತಿಳಿದುಕೊಳ್ಳುವುದು ಸರಳ ಎಂದರು.

































 
 

ಉಪಪ್ರಾಂಶುಪಾಲ ಪೊ. ಶಿವಪ್ರಸಾದ್ ಕೆ ಎಸ್., ಭಾರತೀಯ ಸಂಸ್ಕೃತಿ ಹಾಗೂ ಲಲಿತಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್., ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ವಿಜಯ ಸರಸ್ವತಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿ ರಜತ್ ಜೆ.ಪಿ. ಸ್ವಾಗತಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ವಂದಿಸಿದರು. ಪ್ರಥಮ ವಿದ್ಯಾರ್ಥಿ ನವೀನ್‌ಕೃಷ್ಣ ಎಸ್‌. ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top