ಪುತ್ತೂರು: ಪುಣ್ಯಪ್ಪಾಡಿ ಗ್ರಾಮದ ಸೂಡಿಮುಳ್ಳು ನಿವಾಸಿ ರಾಮಕ್ಕೆ ರೈ( 90 ಪ)ನಿನ್ನೆ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ನಡೆಯಿತು.
ಮೃತರು ಮಕ್ಕಳಾದ ಗಣೇಶ್ ರೈ ಸೂಡಿಮುಳ್ಳು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾಯದರ್ಶಿ ರಾಕೇಶ್ ರೈ ಕಡೆಂಟಿ, ಗಿರಿಶಂಕರ್ ಸುಲಾಯ ದೇವಸ್ಯ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಂಬಿಲ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಹಾಗೂ ಸದಸ್ಯರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ vÁರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಜೋಡಿಬೈಲು, ನಿರ್ದೇಶಕ ಪ್ರಕಾಶ್ ರೈ ನಾಗಕರೆ, ಪುತ್ತೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಪಿ.ಡಿ.ಗಂಗಾಧರ ರೈ ದೇವಸ್ಯ, ಅರಿಯಡ್ಕ ಕೃಷ್ಣ ರೈ ತಳಮನೆ ಪುಣ್ಣಪ್ಪಾಡಿ, ಪ್ರಭಾಕರ್ ಶೆಟ್ಟಿ ನಡುಬೈಲು, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಸವಣೂರು, ಮೋಹನ್ ರೈ ಕೆರೆಕೋಡಿ, ಮೋಹನ್ ದೇವಾಡಿಗ ಸಹಿತ ನೂರಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.