ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಜತ್ತೂರು ಗ್ರಾಮ ಸಮಿತಿ ಮತ್ತು ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಈಶ್ವರಂಭ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಮತ್ತು ದಂತ ಚಿಕಿತ್ಸಾ ಶಿಬಿರ, ವೈದ್ಯಕೀಯ ಶಿಬಿರ ವಳಾಲು ಶಾಲಾ ವಠಾರದಲ್ಲಿ ಇಂದು ನಡೆಯಿತು.
ಬಜತ್ತೂರು ಘಟಕದ ಅಧ್ಯಕ್ಷ ಹರಿಕೃಷ್ಣ ಕಾಂಚನ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಟ್ರಸ್ಟ್ ನ ತಾಲೂಕು ಅಧ್ಯಕ್ಷ ಮಹೇಂದ್ರ ವರ್ಮಾ ಬಜತ್ತೂರು, ಪ್ರಧಾನ ಕಾರ್ಯದರ್ಶಿ ಕೆದಂಬಾಡಿ ಮಠ ರವಿಕುಮಾರ್ ರೈ, ಟ್ರಸ್ಟಿನ ಕೋಶಾಧಿಕಾರಿ ಗಣೇಶ್ ಭಟ್ ಮಕರಂದ, ಶಾರದಾಂಬ ಟ್ರಸ್ಟಿನ ಪದಾಧಿಕಾರಿಗಳು, ಜಸ್ಟಿಸ್ ಕೆ ಎಸ್ ಹೆಗ್ಡೆ ಆಸ್ಪತ್ರೆ ಯ ವೈದ್ಯಧಿಕಾರಿಗಳು ಉಪಸ್ಥಿತರಿದ್ದರು ಸುಮಾರು 350ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ನಾಗರಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು