ಪುತ್ತೂರು ನಗರಸಭೆಯಲ್ಲಿ 3.55 ಕೋಟಿಯ ಮಿಗತೆ ಬಜೆಟ್ ಮಂಡನೆ

ಪುತ್ತೂರು: ಪುತ್ತೂರು ನಗರಸಭೆಯಲ್ಲಿ 2025-26ನೇ ಸಾಲಿನಲ್ಲಿ 3,55,20,214 ಕೋಟಿ ರೂ.ಗಳ ಮಿಗತೆಯ ಬಜೆಟ್ ಮಂಡಿಸಲಾಗಿದೆ. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣ ನಾಯ್ಕ್ ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಬಜೆಟ್‍ ಮಂಡಿಸಿದರು.

2025-26ನೇ ಸಾಲಿಗೆ ನಗರಸಭೆಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ಕಟ್ಟಡ ಪರವಾನಿಗೆ ಶುಲ್ಕ, ಅಂಗಡಿ ಬಾಡಿಗೆ, ಮಾರುಕಟ್ಟೆ ಶುಲ್ಕ ಮತ್ತು ಉದ್ದಿಮೆ ಪರವಾನಿಗೆ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಇತ್ಯಾದಿಗಳಿಂದ ಒಟ್ಟು ಸ್ವಂತ ರಾಜಸ್ವ ಆದಾಯ 13.40.95.000 ಹಾಗೂ ರಾಜ್ಯ ಸರಕಾರದಿಂದ ಬಿಡುಗಡೆ ಆಗುವ ರಾಜಸ್ವ ಅನುದಾನಗಳಾದ ವೇತನ ಅನುದಾನ, ವಿದ್ಯುತ್ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಮತ್ತು ಇತರ ರಾಜಸ್ವ ಅನುದಾನ 13,35,00,000 ಆದಾಯಗಳು ಸೇರಿ ಒಟ್ಟು 25,75,95,000 ರೂ. 2025-26 ನೇ ಸಾಲಿನ ಬಜೆಟ್‍ನಲ್ಲಿ ರಾಜಸ್ವ ಕಂದಾಯ ನಿರೀಕ್ಷಿಸಲಾಗಿದೆ.

ಆದಾಯ ನಿರೀಕ್ಷೆ
ಹಾಗೆಯೇ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 15ನೇ ಹಣಕಾಸು ಅನುದಾನ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಅನುದಾನ, ಸ್ವಚ್ಛ ಭಾರತ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಕುಡಿಯುವ ನೀರಿನ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ, ರಾಷ್ರ‍್ಟೀಯ ನಗರ ಜೀವನೋಪಾಯ ಅಭಿಯಾನ (ನರ್ಮ್), ಅಂಗನವಾಡಿ ಮತ್ತು ಶಾಲಾ ಕಟ್ಟಡ ರಿಪೇರಿ ಹಾಗೂ ಮಲ ತ್ಯಾಜ್ಯ ಸೆಪ್ಟೇಜ್ ನಿರ್ವಹಣ ಅನುದಾನ, ಎಸ್.ಎಫ್.ಸಿ. ವಿಶೇಷ ಅನುದಾನ, ಡಲ್ಟ್ ಅನುದಾನ, ಇಂದಿರಾ ಕ್ಯಾಂಟೀನ್ ದುರಸ್ತಿ ಅನುದಾನ, ಕೆ.ಎಸ್. ಎಂ.ಎಸ್. ಸಿ. ಎಲ್.  ಆರೋಗ್ಯ ಅನುದಾನ, ಪಾರಂಪರಿಕ ಕಸ ವಿಲೇವಾರಿ ಅನುದಾನ, ಇತರೇ ಅನುದಾನ ಸೇರಿ ಒಟ್ಟು 35,95,00,000 ರೂ. ಅನುದಾನಗಳನ್ನು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು  5,48,98,000 ರೂ. ವನ್ನು  ಈ ಬಾರಿಯ ಆಯವ್ಯಯದಲ್ಲಿ ನಿರೀಕ್ಷಿಸಲಾಗಿದೆ. ಅದರಂತೆ ಅನುದಾನಗಳು ಹಾಗೂ ನಗರಸಭಾ ಸ್ವಂತ ಆದಾಯಗಳು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು 67,19,93,000 ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.
ಮುಂಗಡ ಪತ್ರದಲ್ಲಿ ನಿರೀಕ್ಷೆ ಇಟ್ಟುಕೊಂಡಿರುವ ಆದಾಯಗಳಿಂದ ಮೂಲಭೂತ ಸೌಕರ್ಯಗಳಾದ ದಾರಿ ದೀಪ, ರಸ್ತೆ, ಚರಂಡಿ, ಕುಡಿಯುವ ನೀರು, ಘನತ್ಯಾಜ್ಯ ವಸ್ತು ನಿರ್ವಹಣೆ, ಕಚೇರಿ ಕಟ್ಟಡ ನಿರ್ಮಾಣ ಮತ್ತು ಕಚೇರಿಗೆ ಸಂಬಂಧಿಸಿದ ವೆಚ್ಚಗಳಿಗೆ ಹಾಗೂ ಇನ್ನಿತರ ವೆಚ್ಚಗಳಿಗೆ ಆರಂಭದ ಶಿಲ್ಕು ಒಳಗೊಂಡಂತೆ ಒಟ್ಟು .ರೂ.72,79,27,964 ಹಂಚಿಕೆ ಮಾಡಲಾಗಿದೆ.

































 
 

 ಬಯೋಗ್ಯಾಸ್ ಉತ್ಪಾದನೆ
ಪುತ್ತೂರು ನಗರಸಭೆಯ ಘನತ್ಯಾಜ್ಯ ನಿರ್ವಹಣೆಯ ಘಟಕದಲ್ಲಿ ಪ್ರತಿ ದಿನ ಅಂದಾಜು ೧೦  ಟನ್ ಹಸಿ ತ್ಯಾಜ್ಯ ಬಳಸಿಕೊಂಡು ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡಲು ನಗರಸಭೆಯು ರೋಟರಿ ಕ್ಲಬ್ ಪುತ್ತೂರು (ಪೂರ್ವ), ರೋಟರಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಸಂಸ್ಥೆಯೊಂದಿಗೆ  ಪಿ.ಪಿ.ಪಿ. ಮಾದರಿಯಲ್ಲಿ 15  ವರ್ಷಗಳ ಅವಧಿಗೆ ಸದರಿ ಘಟಕದ ಸಂಪೂರ್ಣ ನಿರ್ವಹಣೆ ವೆಚ್ಚವನ್ನು ಸ್ವತಃ ಭರಿಸುವ ಮತ್ತು ಪ್ರತಿನಿತ್ಯ ಉತ್ಪತ್ತಿಯಾಗುವ  ಜೈವಿಕ ಅನಿಲ ಪ್ರಮಾಣದಲ್ಲಿ ಪ್ರತಿ ಕೆ.ಜಿ. ಅನಿಲ ಉತ್ಪತ್ತಿಗೆ ರೂ. 1 ರಂತೆ ನಗರಸಭೆಗೆ ರಾಜಧನದ ರೂಪದಲ್ಲಿ ನೀಡುವ ಕರಾರು ಒಪ್ಪಂದವನ್ನು ಮಾಡಿಕೊಂಡು ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಪ್ರತೀ ದಿನ 10 ಟನ್ ಹಸಿ ತ್ಯಾಜ್ಯ ಬಳಸಿಕೊಂಡು ಗ್ಯಾಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಘಟಕಕ್ಕಿದೆ. ಪ್ರಸ್ತುತ ಪ್ರತೀ ದಿನ 6-7 ಟನ್ ತ್ಯಾಜ್ಯ ಬಳಸಿಕೊಂಡು ಅಂದಾಜು 350 ರಿಂದ 450  ಕೆ.ಜಿ. ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದನೆಯಾಗುತ್ತಿದೆ. ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ನಗರಸಭೆಯು ಮನೆ ಮನೆ ತ್ಯಾಜ್ಯ ಸಂಗ್ರಹಣೆಯ ಕಾರ್ಯ ಮತ್ತು ಸುಸ್ಥಿರತೆಗಾಗಿ ಪ್ರಸ್ತುತ ರೂ. 18 ಲಕ್ಷದಲ್ಲಿ ಎರಡು ಸಿ.ಎನ್.ಜಿ. ಮಿನಿ ಟಿಪ್ಪರ್‌ಗಳನ್ನು ಕೂಡ ಖರೀದಿಸಲಾಗಿದ್ದು, ಸದರಿ ವಾಹನಗಳೊಂದಿಗೆ ಕಛೇರಿಯ ಅಧಿಕಾರಿಗಳು ಬಳಸುವ ಹೊರಗುತ್ತಿಗೆ ವಾಹನಗಳಿಗೂ ಬಳಸಿ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಘಟಕವು ಪ್ರಪಥಮವಾಗಿ ಪುತ್ತೂರು ನಗರಸಭೆಯಲ್ಲಿ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಒಳಚರಂಡಿ ಹಾಗೂ ತ್ಯಾಜ್ಯ ಸಂಸ್ಕರಣ ಘಟಕ
ನಗರಸಭೆ ವ್ಯಾಪ್ತಿಯಲ್ಲಿನಗರಕ್ಕೆ ಬಹುಮುಖ್ಯವಾಗಿರುವ ಒಳಚರಂಡಿ ಹಾಗೂ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣಕ್ಕಾಗಿ ಕೇಂದ್ರ ಪುರಸ್ಕೃತ ಸ್ವಚ್ಛಭಾರತ ಮಿಷಿನ್ ೨.೦ ಅಡಿಯಲ್ಲಿ ರೂ. ೧೪.೫೭ ಕೋಟಿ ಕಾದಿರಿಸಿದ್ದು ಪ್ರಸ್ತುತ ವಿಸ್ತೃತ ಯೋಜನಾ ವರದಿ ತಯಾರಿಸಲು ಈಜಿಸ್ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ.

ಕಛೇರಿ ಡಿಜಿಟಲೀಕರಣ – ಕಾಗದ ರಹಿತ ಕಛೇರಿ
ಪುತ್ತೂರು ನಗರಸಭೆಯ ದೈನಂದಿನ ಕಛೇರಿ ಕೆಲಸ ಕಾರ್ಯಗಳನ್ನು ಇ-ಆಫೀಸ್ ತಂತ್ರಾಂಶದ ಮುಖಾಂತರ ಕೆಲಸವನ್ನು ಸುಲಭಗೊಳಿಸಲು ಹಾಗೂ ಕಡತಗಳನ್ನು ವಿಳಂಬಗೊಳ್ಳದಂತೆ ಕ್ರಮ ವಹಿಸಲು ಈಗಾಗಲೇ ಕ್ರಮವಹಿಸಲಾಗಿದ್ದು, ಇದನ್ನು ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ತರಬೇತಿಯನ್ನು ನೀಡಿ ಮುಂದಿನ ದಿನಗಳಲ್ಲಿ ಕಾಗದ ರಹಿತ ಕಛೇರಿಯನ್ನು ನಿರ್ಮಿಸಲು ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಸಾರ್ವಜನಿಕರು ಕಡತ ವಿಲೇವಾರಿಯನ್ನು ಸಕಾಲದಿಂದ ನಿಗಧಿಯಾಗಿರುವ ದಿನಗಳೊಳಗೆ ವಿಲೇಗೊಳಿಸಲಾಗುವುದು.ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಇ-ಆಸ್ತಿಯನ್ನು ಕಾವೇರಿ ತಂತ್ರಾಂಶದೊಂದಿಗೆ ವಿಲೀನಗೊಳಿಸಿ ಗಣಕೀಕರಣ

ಈಗಾಗಲೇ ಲೋಕಾರ್ಪಣೆಗೊಂಡಿದೆ. ರುದ್ರಭೂಮಿಗಳ ಅಭಿವೃದ್ಧಿ
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು ೧೫ ರುದ್ರ ಭೂಮಿಗಳಿದ್ದು, ಅದರಲ್ಲಿ ಮಡಿವಾಳ ಕಟ್ಟೆ ರುದ್ರಭೂಮಿಯನ್ನು ವಿವಿಧ ಸಂಘ ಸಂಸ್ಥೆಯವರು ನಿರ್ವಹಿಸುತ್ತಿದ್ದು, ರುದ್ರಭೂಮಿಗೆ ಹೆಚ್ಚಿನಬೇಡಿಕೆ ಇರುವುದರಿಂದ ನಗರಸಭೆಯಿಂದ ಅನುದಾನ ಒದಗಿಸಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಇದರೊಂದಿಗೆ ಬೇರೆ ಪ್ರದೇಶದಲ್ಲಿರು ವಸಾರ್ವಜನಿಕ ರುದ್ರಭೂಮಿಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ವಾರ್ಡುಗಳಿಗೆ ಅನುದಾನ
ನಗರಸಭೆಯ ಎಲ್ಲಾ ಸದಸ್ಯರಿಗೆ ಪ್ರತಿ ವಾರ್ಡಿಗೆ 2025-26ನೇ ಸಾಲಿಗೆ ನಗರಸಭೆಯ ಸಾಮಾನ್ಯ ನಿದಿ ಅಡಿಯಲ್ಲಿಎರಡು ಕಂತಿನಲ್ಲಿಒಟ್ಟು ರೂ. 10 ಲಕ್ಷಗಳನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ., ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.
ಸದಸ್ಯರಾದ ಗೌರಿ ಬನ್ನೂರು, ವಿದ್ಯಾ ಆರ್. ಗೌರಿ, ಭಾಮಿ ಅಶೋಕ್ ಶೆಣೈ, ಜೀವಂಧರ್ ಜೈನ್ ಮೊದಲಾದವರು ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಭಾಮಿ ಅಶೋಕ್ ಶೆಣೈ ಮಾತನಾಡಿ, ಸ್ಮಶಾನಗಳ ಅಭಿವೃದ್ಧಿಗೆ 10 ಲಕ್ಷ ಅನುದಾನ ಸಾಕಾಗದು, ಮನೆ ದುರಸ್ತಿಗೆ ಅಮೃತ ನಗರೋತ್ಥಾನದಲ್ಲಿ ಅವಕಾಶ ಕಲ್ಪಿಸಿ ಸರಕಾರದಿಂದ ಅನುದಾನ ಬಿಡುಗಡ ಮಾಡಿಲ್ಲ, ಎಲ್ಲ ಆಚರಂಡಿಗಳ ದುರಸ್ತಿ ಮಾಡಬೇಕು, ನಗರಸಭಾ ಗ್ರಾಮಾಂತರದ ವಾರ್ಡ್‍ ಗಳಿಗೆ ಹೆಚ್ಚು ಅನುದಾನ ನೀಡಬೇಕು ಎಂದು ವಿನಂತಿಸಿದರು. ಜೀವಂಧರ್ ಜೈನ್ ಮಾತನಾಡಿ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಮಾಡುವ, ಆ ಮೂಲಕ ಆದಾಯ ಹೆಚ್ಚಿಸಬೇಕು, ರೈಲ್ವೇ ಅಂಡರ್ ಪಾಸ್ ಬಳಿ ಜಾಗ ಒತ್ತುವರಿಗೆ ಹೆಚ್ಚು ಹಣ ಇರಿಸಬೇಕು, ವಿವಾಹದ ಸಂದರ್ಭದಲ್ಲಿ ವಧುವಿಗೆ ನೀಡಲಾಗುತ್ತಿದ್ದ 10 ಸಾವಿರ ನೆರವನ್ನು ಮರು ಸೇರ್ಪಡೆ ಮಾಡಿ ನೀಡಬೇಕು ಎಂದು ಹೇಳಿದರು. ತಿಂಗಳ ಮೊದಲ ಶನಿವಾರ ನಗರಸಭೆಯಲ್ಲಿ ಕಂದಾಯ ಅದಾಲತ್ ನಡೆಸುವ ವಿಚಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದನ್ನು ಪ್ರತಿ ವಾರ್ಡ್‍ ಗಳಲ್ಲಿ ನಡೆಸಿ ಸಮಸ್ಯೆಗಳನ್ನು ಆಲಿಸಬೇಕು ಎಂದು ವಿನಂತಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top