ಕೋವಿಡ್ ಕಾಲದ ಆಪತ್ಬಾಂಧವ ಮಾಡಿದ ಅಪರಾಧ ಏನು ಗೊತ್ತೆ?
ಮುಂಬಯಿ: ಬಾಲಿವುಡ್‌ನ ಜನಪ್ರಿಯ ವಿಲನ್ ಸೋನು ಸೂದ್ ವಿರುದ್ಧ ಪಂಜಾಬಿನ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ. ಲೂಧಿಯಾನ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ಅವರು ಈ ವಾರಂಟ್ ಹೊರಡಿಸಿದ್ದಾರೆ. ಲೂಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ವಿರುದ್ಧ 10 ಲಕ್ಷ ರೂ. ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ನಾಣ್ಯದಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ ವಂಚಿಸಿದ ಆರೋಪ ಮೋಹಿಲ್ ಶುಕ್ಲಾ ವಿರುದ್ಧ ಇದೆ. ಈ ಪ್ರಕರಣದಲ್ಲಿ ಸೋನು ಸೂದ್ ಮುಖ್ಯ ಸಾಕ್ಷಿಯಾಗಿದ್ದಾರೆ. ಸಾಕ್ಷ್ಯ ಹೇಳಲು ಸೋನು ಸೂದ್ ಅವರಿಗೆ ನ್ಯಾಯಾಲಯಕ್ಕೆ ಬರುವಂತೆ ಸೂಚಿಸಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಬಂಧನ ವಾರಂಟ್ ಹೊರಡಿಸಲಾಗಿದೆ.
ಸೋನು ಸೂದ್ ಅವರನ್ನು ಬಂಧಿಸುವಂತೆ ಮುಂಬಯಿ ಅಂಧೇರಿ ಪಶ್ಚಿಮದ ಓಶಿವಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಲುಧಿಯಾನ ನ್ಯಾಯಾಲಯವು ನಿರ್ದೇಶಿಸಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಫೆ.10ಕ್ಕೆ ಕೋರ್ಸ್ ನಿಗದಿಪಡಿಸಿದೆ.
ಕೊರೊನ ಸಂದರ್ಭದಲ್ಲಿ ಬಡಜನರಿಒಗೆ ನೆರವಾಗುವ ಮೂಲಕ ಸೋನು ಸೂದ್ ಹೆಚ್ಚು ಜನಪ್ರಿಯಗೊಂಡಿದ್ದರು. ಕರ್ನಾಟಕವೂ ಸೇರಿದಂತೆ ವಿವಿಧೆಡೆಗಳಲ್ಲಿ ಸಿಲುಕಿದ್ದ ಜನರಿಗೆ ಅವರ ಸ್ವಂತ ಊರಿಗೆ ತಲುಪಲು ವಾಹನದ ವ್ಯವಸ್ಥೆ, ಬಡವರಿಗೆ ಆಹಾರದ ವ್ಯವಸ್ಥೆ, ಅನೇಕರಿಗೆ ವೈದ್ಯಕೀಯ ನೆರವು ನೀಡಿ ಹಿಂದಿ ಸಿನಿಮಾಗಳ ಈ ವಿಲನ್ ನಿಜ ಜೀವನದಲ್ಲಿ ಹೀರೊ ಆಗಿದ್ದರು.