ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಆಡಳಿತ ಮಂಡಳಿಯ ನಿರ್ದೇಶಕರುಗಳ ಚುನಾವಣೆ ಫೆ. 9ರಂದು ನಡೆಯಲಿದೆ.
ಸಹಕಾರ ಭಾರತಿಯ ಬೆಂಬಲಿತ ಅಭ್ಯರ್ಥಿಯಾಗಿ ಒಟ್ಟು 17 ಅಭ್ಯರ್ಥಿಗಳು ಕಣಕಿಳಿಯಲಿದ್ದಾರೆ.
ಈ ಪೈಕಿ ಸಾಮಾನ್ಯ ಕ್ಷೇತ್ರದಿಂದ 11 ಅಭ್ಯರ್ಥಿಗಳು, ಮಹಿಳಾ ಮೀಸಲಾತಿಯಿಂದ 2 ಅಭ್ಯರ್ಥಿಗಳು, ಹಿಂದುಳಿದ ‘ ಎ ‘ ವರ್ಗದಿಂದ 1 ಅಭ್ಯರ್ಥಿ, ಹಿಂದುಳಿದ ‘ ಬಿ ‘ ವರ್ಗದಿಂದ 1 ಅಭ್ಯರ್ಥಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ ದಿಂದ 1 ಅಭ್ಯರ್ಥಿಗಳು ಕಣದಲ್ಲಿ ಭಾಗವಹಿಸಲಿದ್ದಾರೆ.