“ಪರೀಕ್ಷಾ ಪೆ ಚರ್ಚೆ” ಯಲ್ಲಿ ಈ ವರ್ಷ ಪ್ರಧಾನಿ ಜೊತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು…

ಫೆ.10ರಂದು ಏಳು ಸಾಧಕರ ಜೊತೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲಿರುವ ಮೋದಿ

ಹೊಸದಿಲ್ಲಿ : ವಾರ್ಷಿಕ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಆತ್ಮೀಯ ಸಂವಾದ ಪರೀಕ್ಷಾ ಪೆ ಚರ್ಚೆಗೆ ಈ ವರ್ಷ ಹೊಸ ಆಯಾಮ ದೊರಕಲಿದೆ. ಪ್ರಧಾನಿ ಜೊತೆಗೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಕೂಡ ಪ್ರಧಾನಿ ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಕುರಿತು ಮಕ್ಕಳಿಗೆ ಸಲಹೆ ಸೋಚನೆಗಳನ್ನು ಕೊಡಲಿದ್ದಾರೆ. ಈ ವರ್ಷದ ʼಪರೀಕ್ಷಾ ಪೆ ಚರ್ಚಾʼ ಫೆ.10ರಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಈ ಮೊದಲು ಕೇವಲ ಪ್ರಧಾನಿಯೊಂದಿಗೆ ಮಾತ್ರ ಸಂವಾದ ನಡೆಯುತ್ತಿತ್ತು ಆದರೆ ಈ ವರ್ಷ ಸೆಲೆಬ್ರಿಟಿಗಳು ಕೂಡ ಇದರ ಭಾಗವಾಗಿರಲಿದ್ದಾರೆ. ಸದ್ಗುರು ಜಗ್ಗಿ ವಾಸುದೇವ್‌, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಕುಸ್ತಿ ಪಟು ಮೇರಿ ಕೋಮ್ ಮತ್ತು ವಿಶೇಷ ಚೇತನ ಅವನಿ ಲೇಖರಾ ಸಹಿತ ಏಳು ಸಾಧಕರು ಸಲಹೆಗಳನ್ನು ನೀಡಲಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಮತ್ತು ಶೈಕ್ಷಣಿಕ ಮತ್ತು ಜೀವನದ ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಾರೆ.

ಪರೀಕ್ಷಾ ಪೆ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ 35 ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿರುತ್ತಾರೆ. 50-60 ವಿದ್ಯಾರ್ಥಿಗಳು ಮತ್ತು ಇತರ ಪ್ರಮುಖರು ನೇರವಾಗಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಆನ್‌ಲೈನ್‌ನಲ್ಲಿ ಈ ಬಾರಿ ಪ್ರಧಾನಿ ಮೋದಿಯವರೊಂದಿಗಿನ ಈ ಚರ್ಚೆಗಾಗಿ ಪ್ರಪಂಚದಾದ್ಯಂತದ ದಾಖಲೆಯ 3.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರೂ ಈಗ ಫೆಬ್ರವರಿ 10ರಂದು ಈ ಚರ್ಚೆಯನ್ನು ಆನ್‌ಲೈನ್‌ನಲ್ಲಿ ಕೇಳಲು ಸಾಧ್ಯವಾಗುತ್ತದೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಳ್ಳಬಹುದು. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ನೋಂದಣಿ ಪ್ರಕ್ರಿಯೆ ಡಿಸೆಂಬರ್ 14, 2024ರಿಂದ ಪ್ರಾರಂಭವಾಗಿ ಜನವರಿ 14, 2025ರವರೆಗೆ ನಡೆದಿದೆ. ಒಟ್ಟು 2,500 ಆಯ್ದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರ ಕಲಿಕಾ ಅನುಭವವನ್ನು ಹೆಚ್ಚಿಸಲು ಶಿಕ್ಷಣ ಸಚಿವಾಲಯದಿಂದ ಪಿಪಿಸಿ ಕಿಟ್‌ಗಳನ್ನು ಪಡೆಯಲಿದ್ದಾರೆ.

































 
 

ಅಧ್ಯಯನ ರೀತಿ, ಅತಿಯಾದ ಮೊಬೈಲ್‌ ಬಳಕೆ, ಪರೀಕ್ಷೆಯ ಸಮಯದಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯಾವ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು? ಶಾಲೆ, ಟ್ಯೂಷನ್, ಸ್ವಅಧ್ಯಯನ ಮತ್ತು ವೈಯಕ್ತಿಕ ಸಮಯದ ನಡುವೆ ಸಮತೋಲನ ಸಾಧಿಸುವುದು, ಪರೀಕ್ಷೆಗೆ ತಯಾರಿ, ಏಕಾಗ್ರತೆ ಈ ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬಹುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top