ಮಾನಸಿಕ, ದೈಹಿಕ ದೃಢತೆಗೆ ಈಜು, ಕ್ರೀಡೆ ಸಹಕಾರಿ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪಾರ್ಥ ವಾರಣಾಸಿ

ಪುತ್ತೂರು: ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಸಾಧಿಸಲು ಈಜು ಅಥವಾ ಇನ್ನಿತರ ಕ್ರೀಡಾ ಚಟುವಟಿಕೆಗಳು ತುಂಬಾ ಸಹಕಾರಿಯಾಗುತ್ತವೆ ಎಂದು ಈಜು ತರಬೇತುದಾರ, ಸರ್ಫ್ ಲೈವ್ ಸೇವಿಂಗ್ ಇಂಡಿಯಾದ ನಿರ್ದೇಶಕ ಪಾರ್ಥ ವಾರಣಾಸಿ ಹೇಳಿದರು.

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನರಗಳ ಪುನಶ್ಚೇತನದ ಮೂಲಕ ಜೀವ ಉಳಿಸುವ ಕೌಶಲ್ಯ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಇವರು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸಲು ಅಗತ್ಯವಾದ ವಿವಿಧ ವೈಜ್ಞಾನಿಕ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಕಾಲದಲ್ಲಿ ನೀಡುವ ಪ್ರಥಮ ಚಿಕಿತ್ಸೆಗಳು ವ್ಯಕ್ತಿಯೊಬ್ಬನ ಜೀವನವನ್ನೇ ಉಳಿಸಬಲ್ಲುದು. ಇದನ್ನು ಎಲ್ಲರೂ ತಿಳಿದುಕೊಳ್ಳುವುದು ಆವಶ್ಯಕ ಎಂದರು.



































 
 

ಮತ್ತೋರ್ವ ಸಂಪನ್ಮೂಲ ವ್ಯಕ್ತಿ ರೋಹಿತ್ ಪ್ರಕಾಶ್ ಅವರು ಜಾಗತಿಕ ಸ್ವಾಸ್ಥ್ಯ ಕ್ಕಾಗಿ ವಿಜ್ಞಾನದ ಮಹತ್ವವನ್ನು ಸಾಬೀತುಪಡಿಸುವ ಚಟುವಟಿಕೆಗಳನ್ನು ಪ್ರದರ್ಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ, ಪ್ರತಿಯೊಂದು ವಿಷಯದ ಬಗ್ಗೆಯೂ ಅದು ಯಾಕೆ, ಏನು, ಹೇಗೆ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಹಾಕುತ್ತಾ ಹೋದಾಗ ವಿಷಯದ ಬಗ್ಗೆ ತಿಳುವಳಿಕೆ ದೊರಕುವ ಜತೆಯಲ್ಲಿ ಮೆದುಳಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಸಮಾಜದ ಉನ್ನತಿಗಾಗಿ ವಿಜ್ಞಾನವನ್ನು ಬಳಸಿಕೊಂಡು ದೇಶದ ಪ್ರಜ್ಞಾವಂತ ನಾಗರಿಕರಾಗುವಂತೆ ಕರೆ ನೀಡಿದರು.

ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ. ಶ್ವೇತಾಂಬಿಕಾ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮಹೇಶ್ ಪ್ರಸ್ತಾವನೆಗೈದರು. ಮೇಘನಾ ಅತಿಥಿಗಳನ್ನು ಪರಿಚಯಿಸಿದರು. ನಿಶಿತಾ ಸ್ವಾಗತಿಸಿ, ತೇಜಸ್ವಿ ವಂದಿಸಿದರು. ವೈಷ್ಣವಿ ಎಂ.ಎಸ್ ಮತ್ತು ಸನ್ಮಿತ್ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top