ಆದಾಯ ಮಿತಿ ವಿನಾಯಿತಿ ಮಿತಿ 12 ಲ.ರೂ.ಗೇರಿಕೆ : ಮಧ್ಯಮ ವರ್ಗಕ್ಕೆ ನಿರೀಕ್ಷೆಗಿಂತಲೂ ದೊಡ್ಡ ಗಿಫ್ಟ್‌

2025-26 ಬಜೆಟ್‌ಲ್ಲಿ ಏನೇನಿದೆ?

ಹೊಸದಿಲ್ಲಿ : ಬಜೆಟ್‌ 2025ರಲ್ಲಿ ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಗಿಫ್ಟ್‌ ಕೊಟ್ಟಿದೆ. ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಪ್ರತಿ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಹೀಗಾಗಿ ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್‌ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್‌ ಘೋಷಣೆ ಮಾಡಿದ್ದಾರೆ. ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.



















































 
 

ಬಜೆಟ್‌ ಹೈಲೈಟ್ಸ್‌

  • ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಗಳಿಸುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಕ್ಕೆ 75,000 ರೂ.ಗಳ ಪ್ರಮಾಣಿತ ಕಡಿತವನ್ನು ಸೇರಿಸಿದರೆ, ವಾರ್ಷಿಕ 12.75 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ತೆರಿಗೆದಾರರು ತೆರಿಗೆ ಕಟ್ಟುವಂತಿಲ್ಲ.

*ಔಷಧೀಯ ಕಂಪನಿಗಳು ನಡೆಸುವ ರೋಗಿ ನೆರವು ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಔಷಧಗಳನ್ನು ನೀಡಿದರೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ 37 ಹೊಸ ಔಷಧಗಳು ಮತ್ತು 13 ಹೊಸ ರೋಗಿ ನೆರವು ಕಾರ್ಯಕ್ರಮಗಳನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

*ಕ್ಯಾನ್ಸರ್ ರೋಗಿಗಳು, ಅಪರೂಪದ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಪರಿಹಾರ ಒದಗಿಸಲು, 36 ಜೀವ ಉಳಿಸುವ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗುವುದು ಹಾಗೂ 6 ಜೀವ ಉಳಿಸುವ ಔಷಧಿಗಳಿಗೆ ಕಸ್ಟಮ್ಸ್ ಸುಂಕದಲ್ಲಿ 5% ರಿಯಾಯಿತಿ.

*‘ಧನ್ ಧಾನ್ಯ ಕೃಷಿ’ ಯೋಜನೆ ದೇಶದ 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯ ಮಾಡಲಿದ. ‘ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ’ಯು ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಒಮ್ಮುಖದ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ.

*ತರಕಾರಿಗಳು, ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಲಾಭದಾಯಕ ಬೆಲೆಗಳನ್ನು ಒದಗಿಸಲು ಸಮಗ್ರ ಕಾರ್ಯಕ್ರಮವನ್ನು ಪ್ರಾರಂಭ. ಕೃಷಿಯಿಂದ ಉದ್ಯೋಗ ಸೃಷ್ಟಿ, ವಲಸೆಗೆ ತಡೆ. ಯುವಕರನ್ನು ಕೃಷಿಯತ್ತ ಸೆಳೆಯುವ ಉದ್ದೇಶ. ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹ. ಹಣ್ಣು ಮತ್ತು ತರಕಾರಿ ಬೆಳೆಗೆ ಪ್ರೋತ್ಸಾಹ.

*ಹತ್ತಿ ಬೆಳೆಗೆ ಈ ಐದು ವರ್ಷದಲ್ಲಿ ಆದ್ಯತೆ. ತಂತ್ರಜ್ಞಾನದ ಸಹಕಾರ.ಇದು ಟೆಕ್ಸ್‌ಟೈಲ್ಸ್‌ ವಲಯದಲ್ಲಿ ಹೆಚ್ಚು ಆದಾಯ ತಂದು ಕೊಡಲಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ ಹೆಚ್ಚಳ. ಐದು ಲಕ್ಷಕ್ಕೆ ಹೆಚ್ಚಿಸಲಾಗಿದೆ.

*ಬಾಡಿಗೆಯ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು 2.40 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಹೆಚ್ಚಳ

*ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಳ.

*ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗ.

*ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲು.

*36 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ.

*ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರವು ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ವೇದಿಕೆಯಲ್ಲಿ ನೋಂದಣಿಗೆ ವ್ಯವಸ್ಥೆ.

*ಒಟ್ಟು 20,000 ಕೋಟಿ ರೂ.ನಲ್ಲಿ ಪರಮಾಣು ಶಕ್ತಿ ಮಿಷನ್ ರಚನೆ. 2047ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿ.

*ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜಿಸಲಾಗುವುದು, ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿಶತದಷ್ಟು ಸಾಲವನ್ನು ಅನುಮತಿಸಲಾಗುವುದು. ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲವನ್ನು ಸರ್ಕಾರ ನೀಡಲಿದೆ. ಸರ್ಕಾರವು 120 ಗಮ್ಯಸ್ಥಾನಗಳನ್ನು ಸಂಪರ್ಕಿಸಲು ಪರಿಷ್ಕೃತ UDAN ಯೋಜನೆಯನ್ನು ಪ್ರಾರಂಭಿಸುತ್ತದೆ, ಇದು ಮುಂದಿನ 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ.

*ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಳ.

*ಎಸ್‌ಸಿ/ಎಸ್‌ಟಿ ಸಮುದಾಯಗಳ 5 ಲಕ್ಷ ಮಹಿಳೆಯರಿಗೆ ಲಾಭದಾಯಕವಾಗುವಂತೆ ಐದು ವರ್ಷಗಳ ಅವಧಿಯೊಂದಿಗೆ ಟರ್ಮ್ ಲೋನ್‌ಗಳನ್ನು ನೀಡಲು ಹೊಸ ಯೋಜನೆ.

*ಮೇಕ್ ಇನ್ ಇಂಡಿಯಾ ಬ್ರ್ಯಾಂಡ್​ನೊಂದಿಗೆ ಆಟಿಕೆಗಳ ವಲಯಕ್ಕಾಗಿ, ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಯೋಜನೆಯನ್ನು ಜಾರಿ..

*ಯೂರಿಯಾ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಲು ಅಸ್ಸಾಂನಲ್ಲಿ ಯೂರಿಯಾ ಪ್ಲಾಂಟ್ ಸ್ಥಾಪಿಸಲಾಗುವುದು, ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರವನ್ನು ಅಸ್ಸಾಂನ ನಾಮ್ರೂಪ್‌ನಲ್ಲಿ ಸ್ಥಾಪಿಸಲಾಗುವುದು, ಪೂರ್ವ ಪ್ರದೇಶದಲ್ಲಿ ನಿಷ್ಕ್ರಿಯವಾಗಿದ್ದ 3 ಯೂರಿಯಾ ಸ್ಥಾವರಗಳನ್ನು ಪುನಃ ತೆರೆಯಲಾಗಿದೆ.

*ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ವಿಸ್ತರಿಸಲಾಗುವುದು.

*ಹಣಕಾಸು ಸಚಿವರು ಭಾರತದ ಪಾದರಕ್ಷೆ ಮತ್ತು ಚರ್ಮದ ವಲಯಕ್ಕೆ ಮೀಸಲಾದ ಯೋಜನೆ. ಇದು 22 ಲಕ್ಷ ವ್ಯಕ್ತಿಗಳಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ, 4 ಲಕ್ಷ ಕೋಟಿ ರೂ. ಆದಾಯವನ್ನು ಸಾಧಿಸುತ್ತದೆ ಮತ್ತು ರಫ್ತುಗಳನ್ನು 1.1 ಲಕ್ಷ ಕೋಟಿಗೆ ರೂ.ಗೆ ಹೆಚ್ಚಿಸುತ್ತದೆ.

*ಇಂಡಿಯಾ ಪೋಸ್ಟ್ ಅನ್ನು ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

  • ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್​ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top