ಕಾಣಿಯೂರು: ಕುದ್ಮಾರು ನ.ಉ.ಹಿ. ಪ್ರಾ ಶಾಲೆಯಲ್ಲಿ ಹುತಾತ್ಮರ ದಿನಾಚರಣೆಯನ್ನು ಜ.30ರಂದು ಆಚರಿಸಲಾಯಿತು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯನ್ನು ಹಾಡಲಾಯಿತು. ಶಿಕ್ಷಕಿ ಪ್ರಿಯಾಂಕ ದಿನದ ಮಹತ್ವದ ಕುರಿತಾಗಿ ಮಾಹಿತಿ ನೀಡಿದರು.
ಹುತಾತ್ಮರ ದಿನಾಚರಣೆಯನ್ನು ಆಚರಿಸುವುದರ ಹಿನ್ನೆಲೆ, ಗಾಂಧೀಜಿಯವರ ಜೀವನ ಚರಿತ್ರೆ ಮತ್ತು ಹುತಾತ್ಮರನ್ನು ಸ್ಮರಿಸಲಾಯಿತು. ಬಳಿಕ ಮೌನ ಪ್ರಾರ್ಥನೆಯನ್ನು ಮಾಡಿ ಹುತಾತ್ಮರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.